ಒಂದು ಬದಿ ಕಡಲು

Author : ವಿವೇಕ ಶಾನಭಾಗ

Pages 216

₹ 200.00




Year of Publication: 2018
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಈ ಕಥನವು ಘಟಿಸುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಕರಾವಳಿಯ ಈ ಜಿಲ್ಲೆಯಲ್ಲಿ ಹಲವು ನದಿಗಳು ಹರಿದು ಸಮುದ್ರ ಸೇರುತ್ತವೆ. ನದಿಯು ಸಮುದ್ರವನ್ನು ಸೇರುವ ತಾಣವು ದೂರದಿಂದ ಶಾಂತ ಮನೋಹರವಾಗಿ ತೋರಿದರೂ, ಆ ಅಳಿವೆಯ ನಡುವೆ ಹೋಗಿ ನೋಡಿದಾಗಲೇ ನದಿಯು ಸಾಗರವನ್ನು ಸೇರುವಾಗಿನ ಕೋಲಾಹಲ ಕಾಣುವುದು. ಅಂತೆಯೇ ಬದಲಾವಣೆಯೊಡನೆ ಸೆಣಸುತ್ತಿರುವ ಇಲ್ಲಿಯ ಜೀವನವೂ ಹೀಗೆ ನಡೆಯುತ್ತದೆ. 

ಒಂದು ಊರು ನಮಗೆ ನಮ್ಮ ಬಾಲ್ಯದಲ್ಲಿ ಕಂಡಂತೆಯೇ ನಮ್ಮ ತಾರುಣ್ಯದಲ್ಲಿ, ಯೌವನದಲ್ಲಿ, ನಡುವಯಸ್ಸಿನಲ್ಲಿ ಮತ್ತು ಮುದಿತನದಲ್ಲಿ ಕಾಣುವುದಿಲ್ಲ. ಊರು ಕಾಲಮಾನಕ್ಕೆ ತಕ್ಕಂತೆ ಬದಲಾಗುವುದು ಸಹಜ ವಿದ್ಯಮಾನವೇ. ಆದರೆ ಅದು ಬದಲಾಗುವ ಪ್ರಕ್ರಿಯೆ ತುಂಬ ಕುತೂಹಲಕರ. ಪೇಟೆ ಆಧುನಿಕ ಸ್ವರೂಪ ಪಡೆದುಕೊಳ್ಳುವುದು, ಕಟ್ಟಡಗಳೇಳುವುದು ಇತ್ಯಾದಿ ಕಣ್ಣಿಗೆ ಹೊಡೆದು ಕಾಣಿಸುತ್ತದೆ, ಅದರಲ್ಲೇನೂ ವಿಶೇಷವಿಲ್ಲ. ಆದರೆ ಊರು ಬದಲಾಗುವುದೆಂದರೆ ಊರಿನ ಮಂದಿ ಕೂಡ ತಲೆಮಾರಿನಿಂದ ತಲೆಮಾರಿಗೆ, ಒಂದೇ ತಲೆಮಾರು ತನ್ನ ವಯಸ್ಸಿನ ವಿಭಿನ್ನ ಘಟ್ಟಗಳಲ್ಲಿ, ತನ್ನ ಬದುಕಿನ ವಿವಿಧ ಸ್ತರಗಳಲ್ಲಿ ಬದಲಾಗುವುದು. ಆದರೆ ಇದೆಲ್ಲ ಅಷ್ಟು ಢಾಳಾಗಿ ಒಡೆದು ಕಾಣುವುದಿಲ್ಲ. ಹೀಗೆ ಊರಿನ ಕಥನವನ್ನು ಕಟ್ಟಿಕೊಟ್ಟಿದ್ದಾರೆ ವಿವೇಕ ಶಾನಭಾಗ ಅವರು.

About the Author

ವಿವೇಕ ಶಾನಭಾಗ

ವಿವೇಕ  ಶಾನಭಾಗ ಅವರು ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಿವೇಕ ಅವರು 'ದೇಶಕಾಲ' ಎಂಬ ಸಾಹಿತ್ಯಕ ಪತ್ರಿಕೆಯನ್ನೂ ಏಳು ವರ್ಷ ಕಾಲ ನಡೆಸಿದರು. ಹೊಸ ಬಗೆಯ ಕಥೆ ಕಟ್ಟುವ ಅವರು ಸಣ್ಣ ಊರು ಅಥವಾ ವಿಶಾಲ ಜಗತ್ತುಗಳೆರಡರಲ್ಲಿಯೂ ಮನುಷ್ಯರ ಮನಸ್ಸಿನ ಆಯಾಮ ಗುರುತಿಸಬಲ್ಲರು. ಅವರ ’ಘಾಚರ್ ಘೋಚರ್ ನೀಳ್ಗತೆಯ ಇಂಗ್ಲಿಷ್ ಅನುವಾದ ಜಗತ್ತಿನ ಸಾಹಿತ್ಯ ವಲಯದ ಗಮನ ಸೆಳೆದಿದೆ. ಲಂಡನ್, ಅಮೆರಿಕಗಳಲ್ಲಿ ಪ್ರತ್ಯೇಕ ಆವೃತ್ತಿ ಕಂಡಿರುವ ಈ ಕೃತಿ ಜಗತ್ತಿನ 18 ಭಾಷೆಗಳಿಗೆ ಅನುವಾದಗೊಂಡು ಮಚ್ಚುಗೆ ಗಳಿಸಿದೆ. ಅಂಕುರ, ಲಂಗರು, ಹುಲಿಸವಾರಿ, ಮತ್ತೊಬ್ಬನ ...

READ MORE

Related Books