`ಒಂದು ಮಸಾಜ್ ಪಾರ್ಲರ್ ಕಥೆ’ ಡಿ.ಎನ್. ಶ್ರೀನಾಥ್ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಈ ಕೃತಿಯಲ್ಲಿ ಪ್ರೇಮಕಥೆ ಮಾತ್ರವಲ್ಲ, ಅದು ನಿತ್ಯದ ಸಂಬಂಧಗಳ ಕಥೆಯನ್ನು ಒಳಗೊಂಡಿದೆ. ಆಧುನಿಕ ಸಭ್ಯತೆಯಲ್ಲಿರುವ ಕುಟುಂಬಗಳಿಗೆ ಒಂದು ಎಚ್ಚರಿಕೆಯ ಗಂಡೆಯಾಗಿ ಇಲ್ಲಿನ ಕಥಾವಸ್ತು ಮೂಡಿಬಂದಿದೆ. ಎಚ್ಚರಿಕೆ ಎಂದರೆ, ನ್ಯಾನ್ಸಿ ಮೂವರು ಪತಿಯರನ್ನು ಬದಲಿಸಿದರೂ,ಅವಳಿಗೆ ಯಾರಲ್ಲೂ ಸಂತಸ ಲಭಿಸುವುದಿಲ್ಲ; ಪ್ರತಿ ಬಾರಿ ತನ್ನ ಹೊಸ ಪತಿಯ ಹೋಲಿಕೆಯಲ್ಲಿ ತನ್ನ ಮೊದಲ ಪತಿಯೇ ಲೇಸೆಂದು ಅನಿಸುತ್ತದೆ. ಮೂವರನ್ನು ಬದಲಿಸಿದ ನಂತರ, ತನ್ನ ಅಹಂಕಾರವೇ ಈ ಅಗಲಿಕೆಗೆ ಕಾರಣವೆಂಬ ಅರಿವಾಗುತ್ತದೆ. ತಾನು ತನ್ನ ಮೊದಲ ಪತಿಯೊಂದಿಗೇ, ಅಲ್ಪ-ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ,ಮೂವರನ್ನು ಬದಲಿಸಬೇಕಿರಲಿಲ್ಲ ಹಾಗೂ ಪದೇ - ಪದೇ ವಿಚ್ಚೇದನದ ದುರಂತದಿಂದ ಸಾಗಬೇಕಿರಲಿಲ್ಲ ಎಂದೂ ಮನಗಾಣುತ್ತಾಳೆ. 'ಒಂದು ಮಸಾಜ್ ಪಾರ್ಲರ್ ಕಥೆ' ಭಾರತೀಯ ಮಹಿಳೆಯೊಬ್ಬಳ ಸೋಲಿನ ಕಥೆಯಷ್ಟೇ ಆಗದೆ ಗೆಲುವಿನ ಕತೆಯೂ ಆಗಿದೆ.
ಅನುವಾದಕ ಶ್ರೀನಾಥ್ ಅವರು ಹುಟ್ಟಿದ್ದು 1950 ಡಿಸೆಂಬರ್ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ" ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...
READ MORE