ನಿರಂತರ ಟಿ.ಎಸ್ ರಮಾನಂದರ ಕೃತಿಯಾಗಿದೆ. ನಿಂಗಮ್ಮತ್ತೆ ಹಿಂದಿನ ಕಾಲದ ಹೆಣ್ಣಿನ ಕತೆ ಹೇಳುತ್ತಿದ್ದರು. ಭರಮಜ್ಜಿ ತವರುಮನೆಯ ಹೆಣ್ಣುಗಳು ಯುದ್ಧಕಾಲದಲ್ಲಿ ಶತ್ರುಸೈನಿಕರ ಅತ್ಯಾಚಾರಕ್ಕೆ ಒಳಗಾಗಿದ್ದನ್ನು ಹೇಳುತ್ತಾ ಅಷ್ಟು ಆಗಿನ ಹೆಣ್ಣು ಹೆಂಗಸರಿಗೆ ಗಂಡಸರ ಬೆಂಬಲವಿರಲಿಲ್ಲ ಕಣೆ ತಾಯಿ, ಹೆಣ್ಣಿಗೆ ಸ್ವಂತಕ್ಕೆ ಯೋಚನೆ ಮಾಡೋ ಅಷ್ಟು ಬುದ್ದೀನೂ ಇರಲಿಲ್ಲ ಕಣವ್ವ. ಸತ್ಯಗಳು ಊರು ನುಗ್ಗಿದರೆ ಗಂಡಸರೆಲ್ಲಾ ಕಾಡುಬೀಳಾರು, ಒಬ್ಬನಾದರೂ ಹೆಂಗಸರ ಗತಿಯೇನಾದೀತು ಅಂತಯೋಚಣೆ ಮಾಡುತಿರಲಿಲ್ಲ. ನಮ್ಮ ಕಾಲಕ್ಕೆ ಸೋಲ್ಪ ಬದಲಾತು ಅನ್ನು, ಯುದ್ಧಗಳು ಕಡಿಮೆಯಾದ್ದು, ಹೊಲ ಮನೇಲಿ ದುಡಿಯೋ ಹೆಂಗಸರಿಗೆ ನಿಧಾನಕ್ಕೆ ವ್ಯವಾರ ಅರ್ಥಾಗಾಕ ಸುರುವಾತು. ಅತ್ತಾಗೆ ಪೂರ್ತಿ ಸ್ವತಂತ್ರಾನೂ ಇಲ್ಲ, ಇತ್ತಾಗಿ ಪೂರ್ತಿರಕ್ಷಣೇನೂ ಇಲ್ಲ, ಅಂತಾಕಾಲ. ಸತೃಗಳು ಬಂದು ಬಲಾತ್ಕಾರ ಮಾಡ್ತಿರಲಿಲ್ಲ ನಿಜ, ಮನೆಗಂಡಸರೇ ಅತ್ಯಾಚಾರ ಮಾಡೋರು ಕಣ್ಣಾಯಿ. ಆಮೇಕೆ ಸರೋಜಮ್ಮನ ಕಾಲಕ್ಕೆ ಎಲ್ಲೂ ರೀತಿ ಉತ್ತಮ ಆತು. ಗಂಡಂದಿರುದುಡಿದ ದುಡ್ಡನ್ನೆಲ್ಲಾ ಹೆಂಡತೀರಕ್ಕೆ ಯಾಗೆ ತಂದಿಕ್ಕೋರು, ಆದರೆ ಗಂಡಸರರೀತಿನೀತಿಪ್ರಶ್ನೆ ಮಾಡಾಂಗಿರಲಿಲ್ಲ. ( ಆಯ್ದ ಭಾಗ)
ವೃತ್ತಿಯಿಂದ ಪಶುವೈದ್ಯರಾದ ಡಾ. ಟಿ.ಎಸ್. ರಮಾನಂದ ಅವರು ಪ್ರವೃತ್ತಿಯಿಂದ ಲೇಖಕರು. ತಮ್ಮ ವೈದ್ಯಕೀಯ ಅನುಭವವನ್ನು ಸೊಗಸಾದ ರೀತಿಯಲ್ಲಿ ಅಕ್ಷರಕ್ಕೆ ಇಳಿಸಿದ್ದಾರೆ. ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. 1974 ರಿಂದ ಕರ್ನಾಟಕ ಸರ್ಕಾರದ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2006 ರಲ್ಲಿ ನಿವೃತ್ತರಾದರು. ಸದ್ಯ ಶಿವಮೊಗ್ಗ ನಿವಾಸಿ. 'ವೈದ್ಯರ ಶಿಕಾರಿ', 'ದಿಟನಾಗರ ಕಂಡರೆ' ಮತ್ತು 'ವೃತ್ತಿ ಪರಿಧಿ' ಇವು ಮೂರು ಪ್ರಕಟಿತ ಕೃತಿಗಳು. ವೃತ್ತಿಯ ಅನುಭವವನ್ನು ತಮ್ಮ ಆಕರ್ಷಕ ಶೈಲಿ ಬರವಣಿಗೆಯ ಮೂಲಕ ಕೃತಿಗಳಾಗಿಸಿದ್ದಾರೆ. ಪಶುವೈದ್ಯರ ವಿಶಿಷ್ಟ ಹಾಗೂ ವಿಶೇಷ ಜೀವನಾನುಭವಗಳನ್ನು ಸಮಾಜಕ್ಕೆ ತಲುಪಿಸಿದ್ದಾರೆ. ...
READ MORE