ನೀ ನಡೆವ ದಾರಿಯಲ್ಲಿ- ಡಾ. ಎಂ. ವೆಂಕಟಸ್ವಾಮಿ ಅವರ ಕಾದಂಬರಿ. ಕೃತಿಗೆ ಬೆನ್ನುಡಿ ಬರೆದ ಕವಿ ಹಾಗೂ ಸಾಹಿತಿ ಜರಗನಹಳ್ಳಿ ಶಿವಶಂಕರ್ `ಈಗಾಗಲೇ `ಮೂಡಲ ಮರೆಯಲ್ಲಿ', `ಚಂದ್ರನಿಲ್ಲದ ಆಕಾಶ' ಮತ್ತು `ರೂಪರಾಶಿಯರು' ಕಾದಂಬರಿಗಳನ್ನು ವಾಸ್ತವ ಸಂಗತಿಗಳಿಗೆ ತೀರಾ ಹತ್ತಿರವಾದ ಪಾತ್ರಗಳಲ್ಲಿ ಸಾಮಾಜಿಕ ಮೌಲ್ಯಗಳೊಂದಿಗೆ ನೈಜವಾಗಿ ಚಿತ್ರಿಸಿದ್ದಾರೆ. ಪ್ರಸ್ತುತ 'ನೀ ನಡೆವ ದಾರಿಯಲ್ಲಿ' ಕಾದಂಬರಿ ಒಂದು ಸುಂದರ ಸಾಮಾಜಿಕ ಕಾದಂಬರಿ. ಇಲ್ಲಿನ ಪಾತ್ರಗಳು ನಮ್ಮ ನಡುವಿನ ಆದರ್ಶ ವಿದ್ಯಾರ್ಥಿಗಳ ಕತೆಯಾಗಿದೆ. ಮನ ಕಲುಕುವ ಘಟನೆಗಳೊಂದಿಗೆ ಕೂಡಿರುವ ಈ ಕಾದಂಬರಿ ಒಂದು ಸುಂದರ ಓಟವಾಗಿದೆ' ಎಂದು ಪ್ರಶಂಸಿಸಿದ್ದಾರೆ.
`ನೀ ನಡೆವ ಹಾದಿಯಲ್ಲಿ' ಕಾದಂಬರಿ ಉದಯವಾಣಿ ದಿನ ಪತ್ರಿಕೆಯಲ್ಲಿ 2003ರಲ್ಲಿ 73 ಕಂತುಗಳಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಪ್ರಸ್ತುತ ಎಂಜಿನಿಯರಿಂಗ್, ವೈದ್ಯಕೀಯ, ಡಿಗ್ರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಿಂದೆಂದಿಗಿಂತ ಇಂದು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಅವರ ಭವಿಷ್ಯ ಡೋಲಾಯಮಾನವಾಗಿದೆ. ಜಾಗತೀಕರಣವೆಂಬ ಕತ್ತಿ ಅವರಿಗೆ ಯೋಚಿಸಲು ಸಹ ಸಮಯ ಕೊಡದೆ ಒಂದು ಕಡೆ ಪ್ರಿಯಾಶೀಲತೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಷ್ಕ್ರಿಯ ಗೊಳಿಸಿದ್ದರೆ ಇನ್ನೊಂದು ಕಡೆ ಸ್ಪರ್ಧಾತ್ಮಕ ಪ್ರಪಂಚ ನಿರಂತರವಾಗಿ ಅವರ ಯೋಚನೆಗಳನ್ನು ಕ್ಷಣಕ್ಷಣಕ್ಕೂ ಬದಲಿಸುತ್ತಾ ಹೋಗುತ್ತದೆ. ಒಬ್ಬ ವಿದ್ಯಾರ್ಥಿಯ ಬೌದ್ಧಿಕತೆ ಅಥವ ಜ್ಞಾನವೆನ್ನುವುದು ಈಗ ಒಂದು ಕಂಪನಿಯಲ್ಲಿ ಹುದ್ದೆಯನ್ನು ಗಿಟ್ಟಿಸಿಕೊಳ್ಳುವುದು ಅಥವ ಹೆಚ್ಚು ಹಣವನ್ನು ಸಂಪಾದಿಸುವುದು ಮಾತ್ರ ಎನ್ನುವ ಮಟ್ಟಕ್ಕೆ ತಲುಪಿದೆ. ಇದೆಲ್ಲದರ ನಡುವೆ ಇಂದಿನ ವಿದ್ಯಾರ್ಥಿ ಜೀವನ ಹೇಗಿದೆ? ಅವರ ಆದರ್ಶ ಆಸೆ-ಅಕಾಂಕ್ಷೆಗಳು, ದುಗುಡ-ದುಮ್ಮಾನ, ಸುಖ-ದುಃಖ, ಪ್ರೀತಿ-ಪ್ರೇಮ, ಕುಡಿತ-ಜೂಜು, ಅವರ ಚೇಷ್ಟೆಗಳು ಹೀಗೆ... ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಏನೆಲ್ಲ ಯೋಚಿಸುತ್ತಾರೆ? ಅವರ ನಡುವಿನ ಸಂಬಂಧಗಳು ಹೇಗಿರುತ್ತವೆ? ಎನ್ನುವುದರ ಬಗ್ಗೆ ಈ ಕಾದಂಬರಿಯ ಕತೆಯನ್ನು ಹೆಣೆಯಲಾಗಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿ (SAIL) ಕೆಲಸ ಮಾಡಿದ್ದರು. ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...
READ MORE