ಹಿರಿಯ ಲೇಖಕ ಕೆ.ಟಿ.ಗಟ್ಟಿ ಅವರ ಕಾದಂಬರಿ ‘ಕರ್ಮಣ್ಯೇವಾಧಿಕಾರಸ್ತೆ’. ಅವರೇ ಹೇಳುವಂತೆ ಈ ಕೃತಿ ಅವರು 1973ರಲ್ಲಿ ಇಥಿಯೋಪಿಯದ ನೆಲದಲ್ಲಿ ಕುಳಿತು ಬರೆದ ಮೊದಲ ಕಾದಂಬರಿ, 1973ರಲ್ಲಿ ಬರೆದ ಗಟ್ಟಿ ಅವರ ಮೊದಲ ಕಾದಂಬರಿ 'ಶಬ್ದಗಳು' 'ಸುಧಾ' ವಾರಪತ್ರಿಕೆಯ ಧಾರಾವಾಹಿಯಾಗಿ ಪೂರ್ಣಗೊಂಡ ಬೆನ್ನಲ್ಲೇ (1974ರಲ್ಲಿ) 'ಕರ್ಮಣ್ಯ ವಾಧಿಕಾರಸ್ತೆ' 'ಸುಧಾ'ದಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಆದರೆ ಅದು ಪುಸ್ತಕವಾಗಿ ಹೊರಬಂದುದು 1982ರಲ್ಲಿ, ಇಥಿಯೋಪಿಯಾ ಬಿಟ್ಟು ಬಂದ ಬಳಿಕ. ಅನಂತರ, ಎರಡನೆಯ ಮುದ್ರಣ ಕಂಡದ್ದು 1987ರಲ್ಲಿ. ‘ಈ ಕಾದಂಬರಿಯ ವಸ್ತು ಒಂದು ಚಲನಚಿತ್ರದಂತೆ ನನ್ನ ಮನದಲ್ಲಿ ಮೂಡಿದ್ದು 1971ರಲ್ಲಿ; ಹೇಗೆ ಎಲ್ಲಿ ಎನ್ನುವುದನ್ನು ಈ ಕಾದಂಬರಿಯ ಆರಂಭದ ಮೂವತ್ತು ಸಾಲುಗಳು ಹೇಳುತ್ತವೆ’ ಎನ್ನುತ್ತಾರೆ ಲೇಖಕ ಕೆ.ಟಿ.ಗಟ್ಟಿ. ವಾಸ್ತವದಲ್ಲಿ, ಭೌತಿಕವಾಗಿ ಅಲ್ಲಿ ಇರದ ಅಭಯಾನಂದನ ಆತ್ಮದೊಳಹೊಕ್ಕು ಈ ಲೇಖಕ ನಿದ್ರೆ, ಕನಸು ಮತ್ತು ಎಚ್ಚರದಲ್ಲಿ ಇಡೀ ರಾತ್ರಿ ಮಿಸುಕಾಡುತ್ತಿದ್ದ. ಆ ಮಿಸುಕಾಟದಲ್ಲಿ ಹುಟ್ಟಿದ್ದು ಈ ಕಾದಂಬರಿಯ ಮೂಲವಸ್ತು. ಮೊದಲ ಮುದ್ರಣದ 30 ವರ್ಷಗಳ ಬಳಿಕ ಈ ಕಾದಂಬರಿ ಮರುಮುದ್ರಣಗೊಂಡಿದೆ.
ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ...
READ MORE