‘ಹಿಂದಿರುಗಿ ಬರಲಿಲ್ಲ’ ಹಿರಿಯ ಲೇಖಕ ಕೋ. ಚನ್ನಬಸಪ್ಪ ಅವರ ಸಾಮಾಜಿಕ ಕಾದಂಬರಿ. ಕತೆಯ ನಾಯಕಿ ಶಕುಂತಲೆ. ಸಮಾಜದ ಕಟ್ಟುಪಾಡುಗಳಲ್ಲಿ ಸಿಕ್ಕು ಒದ್ದಾಡುವ ಆಕೆಯ ಮನಸ್ಸು ಮೀರಲಾದರೇ ಆ ಕಟ್ಟುಪಾಡುಗಳೊಳಗೆ ಕುಳಿತುಕೊಳ್ಳಲೂ ಆಗದ ಆಕೆಯ ತಲ್ಲಣಗಳೇ ಇಲ್ಲಿಯ ಕಥಾ ವಸ್ತು.
ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...
READ MORE