ಚಂದ್ರನಿಲ್ಲದ ಆಕಾಶ

Author : ಎಂ. ವೆಂಕಟಸ್ವಾಮಿ

Pages 180

₹ 80.00




Year of Publication: 2000
Published by: ನಿರಂಜನ್‌
Address: 638- 9ಡಿ ಮುಖ್ಯರಸ್ತೆ, ಆರ್‌.ಪಿ.ಸಿ ಲೇಔಟ್‌, ವಿಜಯನಗರ 2ನೇ ಹಂತ ಬೆಂಗಳೂರು-40

Synopsys

‘ಚಂದ್ರನಿಲ್ಲದ ಆಕಾಶ’ ಎಂ.ವೆಂಕಟಸ್ವಾಮಿ ಅವರ ಕಾದಂಬರಿಯಾಗಿದೆ. ಮಧ್ಯಮ ವರ್ಗದ ಜನರ ಜೀವನ ಕ್ರಮವನ್ನು ಆಧಾರಿಸಿದ ಕಾದಂಬರಿಯಾಗಿದೆ. ಆಧುನಿಕತೆಯ ಮೋಹ, ಗೊಡ್ಡು ಸಂಪ್ರಾದಾಯ, ಮೂಡನಂಬಿಕೆ ಇಂತಹ ಎರಡು ಜನ ವರ್ಗಗಳ ಕುಟುಂಬದ ಸಂಘರ್ಷ ಮನಸ್ತಾಪವನ್ನು ಲೇಖಕರು ಎಳೆ ಎಳೆಯಾಗಿ ವಿವರಿಸಿದ್ದಾರೆ. 

About the Author

ಎಂ. ವೆಂಕಟಸ್ವಾಮಿ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು,  ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು.  ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...

READ MORE

Related Books