'ಭೂಮಿಗೆ ಬಂದ ಗಂಧರ್ವ' ನಾಡೋಜ ಎಚ್.ಎಲ್.ನಾಗೇಗೌಡ ಅವರ ಮಹತ್ವದ ಕಾದಂಬರಿ ಈ ಕೃತಿಗೆ ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಯ ಸಾಹಿತಿಗಳಾದ ಪ್ರೊ. ವಿನಾಯಕ ಕೃಷ್ಣ ಗೋಕಾಕ, ಮತ್ತು ಶಿವರಾಮ ಕಾರಂತರು ಬೆನ್ನುಡಿ ಬರೆದಿದ್ದಾರೆ.
ಜಾನಪದ ಸಾಹಿತ್ಯದಲ್ಲಿ ಒಂದು ಧುರೀಣತ್ವವನ್ನು ವಹಿಸಿ ಜಾನಪದ ಜೀವನವನ್ನು ಸಾಕ್ಷೀರೂಪವಾಗಿ ನೋಡುವಂಥ ಪ್ರತಿಭಾಂಶವುಳ್ಳ ನಾಗೇಗೌಡರು ಭೈರವಿ ಕೆಂಪೇಗೌಡರೆಂಬ ಖ್ಯಾತ ಸಂಗೀತಗಾರರ ಜೀವನದ ಸರ್ವ ಸ್ವಾರಸ್ಯವನ್ನು ಭೂಮಿಗೆ ಬಂದ ಗಂಧರ್ವ' ಎಂಬ ಶ್ರೇಷ್ಠ ಕಾದಂಬರಿಯಲ್ಲಿ ಒದಗಿಸಿಕೊಟ್ಟು ಕನ್ನಡ ನಾಡಿನ ಮನದಲ್ಲಿ ಶಾಶ್ವತವಾಗಿ ಇರುವಂತೆ ಮಾಡಿದ್ದಾರೆ.
ಜಾನಪದ ತಜ್ಞ, ಸಾಹಿತಿ, ದಕ್ಷ ಆಡಳಿತಗಾರರೆನಿಸಿದ್ದ ನಾಗೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯ ‘ದೊಡ್ಡಮನೆ’ ಕುಟುಂಬದಲ್ಲಿ. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಳೀಸಂದ್ರ ಹಾಗೂ ನಾಗತಿಹಳ್ಳಿಯಲ್ಲಿ ಮುಗಿಸಿದ ಅವರು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚನ್ನರಾಯಪಟ್ಟಣದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್, ಮೈಸೂರಿನಲ್ಲಿ ಬಿ.ಎಸ್ಸಿ, ಮತ್ತು ಪೂನದಲ್ಲಿ ಎಲ್.ಎಲ್.ಬಿ ಪದವಿ ಪಡೆದರು. ಮುನ್ಸೀಫ್ ಕೋರ್ಟಿನಲ್ಲಿ ಹೆಡ್ ಮುನ್ಷಿಯಾಗಿ ವೃತ್ತಿ ಆರಂಭಿಸಿದ್ದು ನರಸಿಂಹರಾಜಪುರದಲ್ಲಿ. ಆನಂತರ ಮೈಸೂರು ಸಿವಿಲ್ ಸರ್ವೀಸ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದರು. ಅಲ್ಲದೆ ...
READ MORE