‘ಬೇರು’ ಫಕೀರ ಎಂಬ ಹೆಸರಿನಿಂದ ಬರೆವ ಶ್ರೀಧರ ಬನವಾಸಿ ಅವರ ಕಾದಂಬರಿ. ಇದು ನಮ್ಮ ಕಾಲದ ಬದುಕಿನ ಕುರಿತ ಕಥನ. ಈ ಕಾದಂಬರಿಯಲ್ಲಿ ಕೆಟ್ಟವರು ಬದಲಾಗುತ್ತಾರೆ, ಅಸಹಾಯಕರು ಹೊಸ ವಿಶ್ವಾಸ ಗಳಿಸುತ್ತಾರೆ, ಸೋತಂತೆ ಕಂಡರೂ ಆದರ್ಶವೆನ್ನುವುದು ಕೆಡುಕರನ್ನು ನಾಶ ಮಾಡದೆ ಒಳ್ಳೆಯವರನ್ನಾಗಿ ಪರಿವರ್ತಿಸುತ್ತದೆ. ಬದುಕೆಂಬ ಮರದ ಸಾರವಿರುವುದೇ ಒಳಿತನಲ್ಲಿ. ಕ್ರೌರ್ಯ ಹಿಂಸೆ ಅನ್ಯಾಯ ಇವೆಲ್ಲವೂ ನಿಜ; ಆದರೆ ಮನುಷ್ಯನ ಹಂಬಲವಾದ ಶಾಂತಿ, ಸಮಾಧಾನ, ಸಹಬಾಳುವೆ ಇವೇ ಜೀವನ ವೃಕ್ಷವನ್ನು ಪೊರೆಯುವ ಬೇರುಗಳು. ಇಂಥ ಸ್ವಸ್ಥ ಬದುಕಿನ ಸಾಧ್ಯತೆಯನ್ನು ಈ ಕಾದಂಬರಿ ಅನಾವರಣಗೊಳಿಸುತ್ತದೆ.
'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ, ಯುವ ಪುರಸ್ಕಾರ (2019)