ಕನ್ನಡಿಗರ ನೆಚ್ಚಿನ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ನೆನಪಿನಲ್ಲಿ ಪ್ರದಾನ ಮಾಡುತ್ತಿರುವ 'ಮಾಸ್ತಿ ಪ್ರಶಸ್ತಿ' ಯ ದಶಮಾನೋತ್ಸವದ ಸ್ಮರಣಾರ್ಥ ನಡೆಸಿದ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಪಡೆದ ಕಾದಂಬರಿಯೇ ನಾ ಮೊಗಸಾಲೆ ಅವರ 'ಅರ್ಥ.'
"ಈ ಕಾದಂಬರಿಯು ಅವಿಭಜಿತ ದಕ್ಷಿಣ ಕನ್ನಡ ಜನಜೀವನವನ್ನು , ಅದರಲ್ಲೂ ಮುಖ್ಯವಾಗಿ ಇಂದಿನ (2005) ಹವ್ಯಕ ಬ್ರಾಹ್ಮಣರ ಸಂಸ್ಕೃತಿಯ ಹಿನ್ನೆಲೆ ಮುನ್ನೆಲೆಗಳನ್ನು ಚಿತ್ರಿಸುವ ಕಾದಂಬರಿ." ಎಂದು ಲೇಖಕರು ತಿಳಿಸಿದ್ದಾರೆ.
'ಅರ್ಥ' ಎಂದೊಡನೆ ಮೊದಲು ಎಲ್ಲರಿಗೂ ನೆನಪಾಗುವುದು ಹಣ. ಜನಜೀವನದಲ್ಲಿ ಬೀಸಿದ ಜಾಗತೀಕರಣದ ಗಾಳಿಯೇ ಇದಕ್ಕೆ ಕಾರಣವೆನ್ನಬಹುದು. ಪಾಶ್ಚಾತ್ಯ ಜೀವನದ ಸುಖಭೋಗಗಳ ಆಕರ್ಷಣೆಯಿಂದ ನಮ್ಮ ಜನರು ತಮ್ಮ ಸಂಸ್ಕೃತಿಯನ್ನು ಬದಿಗಿರಿಸುತ್ತಿರುವಂತೆ ಕಂಡು ಬರುತ್ತಿದ್ದ ಕಾಲವದು. ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಎಂಬ ಶಬ್ದಗಳು ಕೇವಲ ಶಬ್ದಕೋಶದಲ್ಲಿ (ಡಿಕ್ಷ್ನರಿ) ಉಳಿದುಬಿಡುವ ಸಾಧ್ಯತೆಯನ್ನು ಸೂಚಿಸುತ್ತಿರುವ ಪರಿಸ್ಥಿತಿ ಕಂಡುಬಂದರೂ, ಕಡೆಗೆ ಸುಭದ್ರವಾಗಿ ಉಳಿಯುವುದು ತಾಯಿ ಬೇರು ಮಾತ್ರ. ಇಲ್ಲೂ ಕಳೆ ಕೀಳುವ ಕೆಲಸ ಆಗಾಗ ನಡೆಯುತ್ತಿರಬೇಕು. ಕಾರಣ, ಮನುಷ್ಯರು ಇದ್ದಲ್ಲಿ ಸರಿತಪ್ಪುಗಳು ಸಂಭವಿಸುತ್ತವೆ ಎಂಬುದನ್ನು ಈ ಕಾದಂಬರಿ ಸಮರ್ಥಿಸುತ್ತದೆ.
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...
READ MORE