ವಿದ್ರೋಹ-ಲಕ್ಷ್ಮಣ ಕೌಂಟೆ ಅವರ ಕಾದಂಬರಿ. ರಾಜಕಾರಣದ ಜೀವಾಳವಾದ ವಂಚನೆ, ಆಡಳಿತಶಾಹಿಯ ಜನವಿರೋಧಿ ನಿಯಮಗಳು, ಚುನಾವಣೆ ಸಂದರ್ಭದಲ್ಲಿ ಮತದಾರರ ವಿವೇಚನಾರಹಿತ ನಡೆಗಳು ಎಲ್ಲವೂ ಪ್ರಜಾಪ್ರಭುತ್ವದ ಉತ್ತಮ ಚೌಕಟ್ಟನ್ನು ಹಾಳು ಮಾಡಿವೆ. ನಂಬಿಕೆ ಆಧರಿಸಿ ಧರ್ಮ ನಿಲ್ಲಬಾರದು. ಸುಳ್ಳು ಸುಳ್ಳೇ. ಅದನ್ನೆಂದೂ ಸತ್ಯದ ಎತ್ತರಕ್ಕೆ ಕೊಂಡೊಯ್ಯಬಾರದು. ಇಂತಹ ಸಂದೇಶವೂ ಈ ಕಾದಂಬರಿಯ ವಸ್ತುವಾಗಿದೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE