`ವಿಚ್ಛೇದನಾ ಪರಿಣಯʼ ಲೇಖಕ ಕೆ.ಸತ್ಯನಾರಾಯಣ ಅವರ ಕಾದಂಬರಿ. ವಿನೂತನ ತಂತ್ರ, ನಿರೂಪಣಾ ವಿಧಾನ ಮತ್ತು ಶೈಲಿಯಿಂದಾಗಿ ಸಿದ್ಧ ಮಾದರಿಯ ಕಾದಂಬರಿಗಳಿಂದ ಭಿನ್ನವಾಗಿ ನಿಲ್ಲುತ್ತದೆ. ವರದಿ, ಅಧ್ಯಯನ, ವಿಡಂಬನೆ, ಕಾಲ್ಪನಿಕ ಜಗತ್ತಿನ ಕಟ್ಟುಕಥೆ, ವಾಸ್ತವಗಳೆಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಹೊಸತನದಿಂದಾಗಿ ಮತ್ತು ಓದುಗನನ್ನು ವಿಭಿನ್ನ ನಿಟ್ಟಿನಿಂದ ಪ್ರವೇಶಿಸುವ ನಿರೂಪಣಾ ವಿಧಾನದಿಂದಾಗಿ ಈ ಕಾದಂಬರಿಯನ್ನು ಹಾಗೇ ಓದಿ ಅರ್ಥ ಮಾಡಿಕೊಂಡುಬಿಟ್ಟೆವು ಎಂದುಕೊಳ್ಳುವ ಹಾಗಿಲ್ಲ. ಓದಿದ ಬಳಿಕ ಈ ಬಗೆಯ ತಂತ್ರ, ಪ್ರಯೋಗಶೀಲತೆ, ಅದರ ಪರಿಣಾಮಕಾರತ್ವ, ಪ್ರಸ್ತುತತೆ ಇತ್ಯಾದಿ ಕುರಿತಂತೆ ಒಂದಷ್ಟು ಚರ್ಚೆ, ವಾದ ಸಾಧ್ಯವಾದಲ್ಲಿ ಇದು ನಮಗೆ ಹೆಚ್ಚು ಸ್ಪಷ್ಟವಾಗುತ್ತದೆ ಎನಿಸುತ್ತದೆ. ಜನಜೀವನ ಸರಳವಾಗಿ ಮನುಷ್ಯ ಸಂಬಂಧದಲ್ಲಿ, ಬದುಕಿನಲ್ಲಿ ರುಚಿ ಕಳೆದುಕೊಂಡು, ಅನ್ಯಮನಸ್ಕವಾಗಿರುವುದನ್ನು ತುಂಬ ಕಲಾತ್ಮಕ ಜಾಣ್ಮೆಯಿಂದ ನಿರೂಪಿಸುವ, ಸೂಕ್ಷ್ಮವಾದ ವಸ್ತುವನ್ನು ಭಾಷೆಯಲ್ಲಿ ನಿಜವಾಗಿಸುವ ತನ್ನ ಕಾವ್ಯಾತ್ಮಕ ಉದ್ದೇಶದಲ್ಲಿಈ ಕಾದಂಬರಿಯು ರಚಿತವಾಗಿದೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE