'ಉತ್ಕಟ' ಸೃಜನ್ ಗಣೇಶ್ ಹೆಗಡೆ ಅವರ ಕಾದಂಬರಿಯಾಗಿದೆ. ಭವದ ಆಕರ್ಷಣೆಯನ್ನು ನಿರ್ಲಕ್ಷಿಸಿ ಭಾವದ ಮೋಹಕತೆಗೆ ಮನಸೋತವರು ಕಲಾವಿದರಾಗುತ್ತಾರೆ. ರೂಢಿಯ ಮಾಯೆಗೆ ಬೆನ್ನು ಹಾಕಿ ನಡೆಯುವುದರಿಂದಲೇ ಅವರಿಗೆ ನೈತಿಕ ಶಕ್ತಿ ಹೆಚ್ಚು. ಅಂತಹ ಮೋಹನರಾಗಕ್ಕೆ ಮನಸೋತ ಯಕ್ಷಗಾನ ಕಲಾವಿದನೊಬ್ಬನ ಬದುಕಿನ ವೃತ್ತಾಂತವೊಂದು ಈ ಕಾದಂಬರಿಯಲ್ಲಿ ದಾಖಲಾಗಿದೆ. ಯಕ್ಷಗಾನದ ಆವರಣದೊಳಗಿಂದರೆ ನೋಡಿ. ಬರೆದ ಕಥನವಿದಾದ್ದರಿಂದ, ಸಂಶಯವಿಲ್ಲದ ಖಚಿತತೆ ಈ ಕೃಷಿಯ ನಿರೂಪಣೆಗೆ ದಕ್ಕಿದೆ.
ಸೃಜನ್ ಗಣೇಶ ಹೆಗಡೆ ಅವರ ಕಾವ್ಯನಾಮ -ಸೃಜನಾಲೋಚನ. ತಂದೆ- ಶ್ರೀಧರ್ ಹೆಗಡೆ ತಾಯಿ- ಜಯಲಕ್ಷ್ಮಿ ಹೆಗಡೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು.ಯಕ್ಷಗಾನ ಭಾಗವತಿಕೆ, ತತ್ವಶಾಸ್ತ್ರ, ಅಧ್ಯಾತ್ಮ ವೈಚಾರಿಕತೆ, ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತಿ. ಇದೆ. ಕೃತಿಗಳು- ಗೊಂಬೆಯ ಸಂಕಟ, ರಾಧಾಸ್ನೇಹಿ, ಅನಂತ ಸೋಪಾನ(ಕವನ ಸಂಕಲನ) ಆಪ್ತ ಬಂಧನ, ಗೋಜಗಾಮೃತ (ಯಕ್ಷಗಾನ ಪ್ರಸಂಗಗಳು) . ...
READ MORE