ಶೋಷಿತರು ಅಸಹಾಯಕರ ಬಗ್ಗೆ ಬರೆಯುವಾಗ ಬೀchi ಅದೆಷ್ಟು ಸೂಕ್ಷ್ಮವಾಗಿರುತ್ತಾರೆ ಎನ್ನುವುದಕ್ಕೆ ಕೃತಿ ಸಾಕ್ಷಿ. ಅನೀತಿಯೂ ಈ ಕಾದಂಬರಿಯಲ್ಲಿ ಎರಡು ಬಗೆಯಲ್ಲಿ ಚಿತ್ರಣಗೊಂಡಿದೆ. ದುರ್ಬುದ್ಧಿ, ದುರ್ಗುಣ, ಅಹಂ, ಅಧಿಕಾರದ ಮದದಿಂದ ಕೆಲವರು ಅನೀತಿವಂತರಾಗುವವರದು ಒಂದು ವರ್ಗ. ಆದರೆ ಅಸಹಾಯಕತೆ, ಬದುಕಿನ ಅನಿವಾರ್ಯತೆ ಕಾರಣಕ್ಕೆ ಅನೀತಿಯ ಮಾರ್ಗ ತುಳಿಯುವವರದು ಇನ್ನೊಂದು ವರ್ಗ.
ಎರಡನೇ ವರ್ಗವನ್ನು ಚಿತ್ರಿಸುವಾಗ ಬೀchi ಅವರು ವಹಿಸುವ ಕಾಳಜಿ, ಎಚ್ಚರ ಅನನ್ಯವಾದುದು. ಅವರ ಉಳಿದ ಕಾದಂಬರಿಗಳಲ್ಲೂ ಇದು ವ್ಯಕ್ತವಾಗಿದೆ.
ReplyForward |
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE