‘ತಲೆಮಾರು’ ಆರ್. ವಿ. ಭಂಡಾರಿ ಅವರ ರಚನೆಯ ಕಾದಂಬರಿಯಾಗಿದೆ. ಪ್ರಗತಿ ಮತ್ತು ಅವನತಿ ಮಧ್ಯೆ ಇರುವ ಸೂಕ್ಷ್ಮ ರೇಖೆಯೊಂದನ್ನು ಗುರುತಿಸಬಹುದಾದ ಒಂದು ತಲೆಮಾರಿನ ಜನಜೀವನದೊಂದಿಗೆ ಹೆಣೆದುಕೊಂಡ ಪ್ರಾದೇಶಿಕ ಕಾದಂಬರಿ, ಸುಮಾರು ಐವತ್ತು ವರ್ಷಗಳಿಂದೀಚೆಗಿನ, ಪ್ರಗತಿಯ ಹಾದಿಯಲ್ಲಿರುವ ಒಂದು ಸಣ್ಣ ಹಳ್ಳಿಯ ಚಿತ್ರಣ ಜೊತೆಗೆ ಬದಲಾವಣೆ ಬಯಸುವ ಯುವಜನಾಂಗದ ಅಭಿಲಾಷೆಯನ್ನು ಕೃತಿ ತೆರೆದಿಡುತ್ತದೆ.
ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್ಚಂದ್ರ ...
READ MOREಹೊಸತು -ಜನವರಿ-2005
ಪ್ರಗತಿ ಮತ್ತು ಅವನತಿ ಮಧ್ಯೆ ಇರುವ ಸೂಕ್ಷ್ಮ ರೇಖೆಯೊಂದನ್ನು ಗುರುತಿಸಬಹುದಾದ ಒಂದು ತಲೆಮಾರಿನ ಜನಜೀವನದೊಂದಿಗೆ ಹೆಣೆದುಕೊಂಡ ಪ್ರಾದೇಶಿಕ ಕಾದಂಬರಿ, ಸುಮಾರು ಐವತ್ತು ವರ್ಷಗಳಿಂದೀಚೆಗಿನ, ಪ್ರಗತಿಯ ಹಾದಿಯಲ್ಲಿರುವ ಒಂದು ಸಣ್ಣ ಹಳ್ಳಿಯ ಚಿತ್ರಣ ಜೊತೆಗೆ ಬದಲಾವಣೆ ಬಯಸುವ ಯುವಜನಾಂಗದ ಅಭಿಲಾಷೆಯನ್ನು ಕೃತಿ ತೆರೆದಿಡುತ್ತದೆ. ದೈನಂದಿನ ಕೆಲಸಕಾರ್ಯಗಳ ಜೊತೆಯಲ್ಲೇ ಒಂದು ಸಮುದಾಯದ ಆಚಾರ ವಿಚಾರವನ್ನೂ ಪರಿಚಯಿಸುತ್ತ ಕ್ರಾಂತಿಕಾರಿ ನಿಲುವಿನ ಕಡೆಗೆ ಕಾದಂಬರಿ ಹೊರಳುತ್ತದೆ. ಸಮಾಜವಾದಿ ಪ್ರಗತಿಪರ ದಾರಿಯಲ್ಲಿ ಕ್ರಮಿಸುವಾಗ ಎದುರಾಗುವ ಐಷಾರಾಮಿ- ಆಧುನಿಕತೆಯ ಹೊಡೆತಕ್ಕೆ ತತ್ತರಿಸುವ ಸಂದರ್ಭಗಳು ಇಂದು ಯುವಜನತೆಗೆ ಶಾಪವಾಗಿವೆ. ಎಲ್ಲ ಪಾತ್ರಗಳೂ ಮಾತನಾಡುವ ವಿಶೇಷ ಧಾಟಿಯಿಂದ ನಾವಿದನ್ನು ಇಲ್ಲಿ ಊಹಿಸಬಹುದು.