ಸಾಹಿತಿ ನಿರಂಜನ ಅವರು ಈ ಕೃತಿಯನ್ನು ಲೇಖಕರು ತೀ. ನಂ. ಶ್ರೀ. ಅವರಿಗೆ ಅರ್ಪಿಸಿದ್ದಾರೆ. ಅಪರಂಪಾರ ಕಥಾನಾಯಕ ನಾಗಿರುವ ಈ ಕಾದಂಬರಿಯು ಐತಿಹಾಸಿಕ ವಿಷಯವನ್ನು ಒಳಗೊಂಡಿದೆ. ಇದರ ವಸ್ತು ಹತ್ತೊಂಬತ್ತನೆಯ ಶತಮಾನದ್ದು. ಸ್ವತಂತ್ರ ರಾಜ್ಯವಾಗಿದ್ದ ಕೊಡಗಿನ ಅರಸ ಚಿಕವೀರ ರಾಜೇಂದ್ರನನ್ನು ಆಂಗ್ಲರು ಪದಚ್ಯುತಗೊಳಿಸಿದ್ದು, ನಷ್ಟವಾದ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಅಪರಂಪಾರನ ನಾಯಕತ್ವದಲ್ಲಿ ನಡೆದ ಪ್ರಯತ್ನ, ಅನಂತರದ ಹೃದಯ ವಿದ್ರಾವಕ ಘಟನೆಗಳು... ಸಂಚುಗಳು ಹೀಗೆಯೇ ಕ್ರಿ. ಶ. 1820ರಿಂದ 1870ರವರೆಗಿನ ಐದು ದಶಕಗಳ ಕಾಲಾವಧಿಯಲ್ಲಿ ನಡೆದ ಒಂದು ಕಥೆ ಈ ಕೃತಿಯಲ್ಲಿ ಇದೆ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE