ಲೇಖಕ ಲಕ್ಷ್ಮಣ ಕೌಂಟೆ ಅವರ ಪೌರಾಣಿಕ ಕಾದಂಬರಿ ಕೃತಿ ʻಋಷ್ಯಶೃಂಗ: ಯುವ ಮಳೆಮುನಿಯೋರ್ವನ ರಾಮಾಯಣ ಪೂರ್ವದ ಕಥೆ ಆಧಾರಿತ ಕಾದಂಬರಿʼ. ಮಹಾಭಾರತದಲ್ಲಿ ಒಂದು ಸಣ್ಣ ಉಪಕಥೆ ಆಗಿ ಬರುವ ಖಷ್ಯಶೃಂಗ ಮುನಿಯ ಕಥೆಯನ್ನು ಕುತೂಹಲಕಾರಿ ಆಗಿ ಹೇಳಿದ್ದಾರೆ. ಇವರು ಕಶ್ಯಪನ ಮೊಮ್ಮಗ ಋಷಿ ವಿಭಾಂಢಕನ ಮಗ. ತನ್ನ ಪತ್ನಿ ತನ್ನನ್ನು ತೊರೆದು ಹೋದಳೆಂಬ ಸಿಟ್ಟಿನಲ್ಲಿ ವಿಭಾಂಢಕ ಮಾನವ ದ್ವೇಷಿ ಆಗಿ ತನ್ನ ಮಗನನ್ನು ಕೌಶಿಕಿ ನದಿ ತೀರದ ಗೊಂಡಾರಣ್ಯ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಎಲ್ಲಾ ಮಂತ್ರ ತಂತ್ರ ಕಲಿಸಿ ಬೆಳೆಸುತ್ತಾನೆ. ತಂದೆಗೆ ವಿಧೇಯನಾಗಿ ಬೆಳೆದ ಋಷ್ಯಶೃಂಗ ಕಠಿಣ ಸಾಧನೆ ಮೂಲಕ ಮಳೆ ದೇವರನ್ನು ಒಲಿಸಿಕೊಳ್ಳುತ್ತಾನೆ. ಹೀಗೆ ತಾನು ಕಾಲು ಇಟ್ಟ ಕಡೆ ಮಳೆ ತರಿಸಲು ಸಾಧ್ಯ ಇರುವ ಅದ್ಬುತ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತಾನೆ. ಆದರೆ ಯೌವನದಲ್ಲಿ ತುಂಬಾ ಸ್ವೇಚ್ಛೆಯಿಂದ ವರ್ತಿಸಿದ ಕಾರಣ ಪುರುಷತ್ವ ಕಳೆದುಕೊಡಿರುತ್ತಾನೆ. ಈ ಕಾದಂಬರಿಯಲ್ಲಿ ರಾಜರ ಸ್ವಾರ್ಥ ಲಂಪಟತನವನ್ನೂ ಅನಾವರಣಗೊಳಿಸಿದ್ದಾರೆ. ಮಳೆ ನೀರಿನ ಸದುಪಯೋಗ, ಗುಡಿ ಗುಡಾರ ಮೇಲೆ ಖರ್ಚು ಮಾಡುವ ಹಣವನ್ನು ಪ್ರಜೆಗಳ ಹಿತಕ್ಕೆ ಖರ್ಚು ಮಾಡಬೇಕು ಎನ್ನುವ ನೀತಿಯನ್ನೂ ಹೇಳಿದ್ದಾರೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE