ವಿಧವೆಯೊಬ್ಬಳ ಮರುಮದುವೆಯ ಪ್ರಸಂಗ, ಅದನ್ನು ಸಹಿಸಲಾಗದ ಸಮಾಜದ ಸ್ಥಿತಿ, ಇದೆಲ್ಲದರ ನಡುವೆ ವಿಧಿ ಆಡುವ ಆಟದ ಚಿತ್ರಣ ’ನಂಬರ್ ಐವತ್ತೈದು’.
ಕಾಯಿಲೆ ಹಿಡಿದು ಆಸ್ಪತ್ರೆ ಸೇರಿರುವ ರಮೇಶನನ್ನು ಕಾಣಲು ಬರುವ ಸ್ನೇಹಿತೆಯೂ ಆದ ವಿಧವೆ ಸುಶೀಲೆ ಆತನ ಪ್ರೇಮದ ಬಲೆಯಲ್ಲಿ ಬೀಳುತ್ತಾಳೆ. ಆದರೆ ಅವಳನ್ನು ಮದುವೆಯಾಗುವುದು ರಮೇಶನ ತಾಯಿಗೆ ಇಷ್ಟವಾಗುವುದಿಲ್ಲ. ಇದೇ ಕೊರಗಿನಲ್ಲಿ ಆಕೆ ಸಾಯುತ್ತಾಳೆ. ರಮೇಶ ತನ್ನ ತಂದೆಯಿಂದಲೂ ದೂರವಾಗಿ ದುಷ್ಟರ ಸಹವಾಸ ಬೆಳೆಸುತ್ತಾನೆ.
ಕಾಲಾನಂತರ ಶ್ರೀಮಂತರೊಬ್ಬರು ತಮ್ಮ ಮನೆಯ ತಿಜೋರಿ ತಗೆಯಲು ರಮೇಶನಲ್ಲಿ ಸಹಾಯ ಕೋರುತ್ತಾರೆ. ತಿಜೋರಿಯಲ್ಲಿ ಸುಶೀಲೆಯ ಭಾವಚಿತ್ರ ಇರುತ್ತದೆ. ಶ್ರೀಮಂತ ಸುಶೀಲೆಯನ್ನು ಮದುವೆಯಾಗಿದ್ದಾಗಿಯೂ ಜೀವನದಲ್ಲಿ ಜಿಗುಪ್ಸೆ ಹೊಂದಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿಯೂ ತಿಳಿಸುತ್ತಾನೆ. ರಮೇಶನಿಗೆ ಆಕೆಯ ಭಾವಚಿತ್ರವಾದರೂ ತನ್ನ ಬಳಿ ಇರಬೇಕು ಎನಿಸಿ ಅದನ್ನು ಕದಿಯಲು ಮತ್ತೆ ಶ್ರೀಮಂತನ ಮನೆಗೆ ಬರುತ್ತಾನೆ. ಆದರೆ ಆ ಕಾರ್ಯದಲ್ಲಿ ವಿಫಲನಾಗಿ ಜೈಲು ಸೇರುತ್ತಾನೆ. ಅಲ್ಲಿ ಆತನಿಗೆ ಖೈದಿಯಾಗಿ ದೊರೆಯುವ ಸಂಖ್ಯೆಯೇ ಐವತ್ತೈದು.
ಸರಳ ಎನಿಸುವ ಈ ಕತೆ ನಿರೂಪಣೆಯ ಕಾರಣಕ್ಕೆ ಗಮನ ಸೆಳೆಯುತ್ತದೆ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE