ನೆಲೆ ನಾಡಿಸೋಜ ಅವರ ಕೃತಿಯಾಗಿದೆ. ಕ್ರಿಸ್ತ ಧರ್ಮದ ಆಚಾರ ವಿಚಾರಗಳು, ಅಲ್ಲಿ ದೇವರ ಹೆಸರಲ್ಲಿ ನಡೆಯುವ ಅನಾಚಾರ, ಚರ್ಚಿನ ಪಾದ್ರಿಗಳು ಹೇಳಿದ್ದೆ ಧರ್ಮವೆಂದು ತಿಳಿಯುವ ಜನರು , ಫಾಥರ್ ಸಲ್ಡಾನೋರ ರವರ ಸರ್ವಾಧಿಕಾರ, ಇಲ್ಲದಿರುವ ಕಾನೂನನ್ನು ಹೇರುವ ಪಾದರಿ ,ಇವುಗಳನ್ನು ಕಂಡು ರೋಸಿ ಹೋಗುವ ಜಾನ್ ತಾನು ಬೈಬಲ್ ನನ್ನು ಓದಲು ಬಯಸಿದಾಗ ಆತನಿಗೆ ಪಾದರ್ ಕೊಟ್ಟ ಪುಸ್ತಕ ಯಾವದು ? ಜಾನ್ ನ ತಂದೆ ವಿಲ್ಸನ್ ಮಾಡುವ ಮೋಸ ವಿಲ್ಲಿಯ ತಂದೆ ಸಂತನ್ ಮೈಸೂರಿನಿಂದ ಫಿಲೋಮೀನಾರ ಮೂರ್ತಿಯನ್ನು ತರುವಾಗ ಆದ ಪವಾಡ ಊರಿನಲ್ಲಿ ಆತ ಕಟ್ಟಿದ ಇಗರ್ಜಿ ಅವನಿಗೆ ಮತ್ತು ಅವನ ಮಗ ವಿಲ್ಲಿಗೆ ಕ್ರಿಸ್ತನಲ್ಲಿರುವ ಭಕ್ತಿ ಇದರಿಂದ ಅವರಿಗೆ ಒಳ್ಳೆದಾದ ಬಗೆ,ದೇವರ ಮೇಲೆ ಭಕ್ತಿ ಇಲ್ಲದೆ ಇದ್ದವರೂ ಶ್ರೀಮಂತರಾಗಿರುವುದು ಹೇಗೆ ಬಡವರು ಇದ್ದಲ್ಲಿಯೇ ಇರಲು ಕಾರಣವೇನು? ಇಗರ್ಜಿಗೆ ಬಾರದವರಿಗೆ ಜ್ಞಾನದಾನ ನಾಮಕರಣ ಮಾಡಲು ಸತ್ತಾಗ ಅವರ ಹೆಣ ಹುಗಿಯಲು ಬಿಡದ ಫಾಥರ್ ರನ್ನು ಕಡೆಗಣಿಸಿ ಮರಿಯಾನ ಮೇಸ್ತ್ರಿ ಹೇಗೆ ತನ್ನ ಮಾವನ ಶವವನ್ನು ಹೂಳಿದರು, ತನ್ನ ಮಗುವಿಗೆ ಹೇಗೆ ಎಲ್ಲಿನಾಮಕರಣ ಮಾಡಿದರು ಕ್ರಿಸ್ಟಿಯಾನಿಟಿ ಒಡೆದು ಹೋಗಲು ಕಾರಣ ಇತ್ಯಾದಿ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಈ ಕಾದಂಬರಿ ಚಿಕ್ಕದಾಗಿದ್ದರೂ ಬೇಸರಿಸದೆ ಓದಿಸಿಕೊಂಡು ಹೋಗುತ್ತದೆ.
ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ...
READ MORE