ಶರಣ ಬಸವಣ್ಣನವರ ಮಡದಿಯರಾದ ನೀಲಾಂಬಿಕೆ ಹಾಗೂ ಗಂಗಾಂಬಿಕೆ ಅವರ ಕುರಿತ ಜೀವನ ಗಾಥೆಯೇ ಈ ಕಾದಂಬರಿ. ಬಸವಣ್ಣನವರ ವ್ಯಕ್ತಿತ್ವ ರೂಪ ಹಾಗೂ ಚಿಂತನೆಯ ಗಟ್ಟಿತನದಲ್ಲಿ ಈ ಇಬ್ಬರು ಶರಣೆಯರ ಪಾತ್ರವನ್ನು ಸ್ವತಃ ಬಸವಣ್ಣನೇ ಪ್ರಸ್ತಾಪಿಸಿದ್ದು ಇದಕ್ಕೆ ವಚನಗಳೇ ಸಾಕ್ಷಿ. ಇಂತಹ ವಿಷಯ ವಸ್ತುಗಳನ್ನು ಆಯ್ಕೆ ಮಾಡಿ ಕಾದಂಬರಿಗೆ ರೂಪ ಕೊಟ್ಟಿದ್ದಾರೆ ಲೇಖಕ-ಲಕ್ಷ್ಮಣ ಕೌಂಟೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE