'ನವಪಲ್ಲವ' ಬೇಲೂರು ರಾಮಮೂರ್ತಿ ಅವರ ಕಾದಂಬರಿ. ಬದುಕು ಹರಿಯುವ ನದಿ. ಆಯಾಯಾ ಪ್ರದೇಶಗಳ ಏರು ತಗ್ಗುಗಳಿಗನ್ವಯ ಹರಿಯುತ್ತಿರುತ್ತದೆ. ಸದಾಶಿವನ ಬದುಕು ಇಂಥಾದ್ದೊಂದು ನದಿ. ಚಿಕ್ಕ ವಯಸ್ಸಿನಿಂದ ಅವನು ಅನುಭವಿಸಿದ ತಾಪತ್ರಯಗಳಿಗೆ ಮುಕ್ತಿ ದೊರಕಿದ್ದು ಅವನ ಬಾಳಿನಲ್ಲಿ ಕವಿತ ಬಂದಾಗ. ಆದರೆ ಚಿಕ್ಕಂದಿನಲ್ಲಿ ಅವನ ಅಂತರಂಗದಲ್ಲಿ ಮನೆ ಮಾಡಿದ್ದ ಗೀತ ಮತ್ತೆ ಅವನ ಬದುಕನ್ನು ಪ್ರವೇಶಿಸಿದಾಗ ಅಲ್ಲೋಲ ಕಲ್ಲೋಲವಾಗುತ್ತದೆ. ಕವಿತಳಿಗೆ ಮಕ್ಕಳು ಆಗೋದಿಲ್ಲ ಎನ್ನುವುದು ತಿಳಿದಾಗ ಕವಿತಳೇ ಸದಾಶಿವ ಗೀತಳನ್ನು ಮದುವೆಯಾಗುವಂತೆ ಮಾಡುತ್ತಾಳೆ. ಆದರೆ ಗೀತಳಿಗೆ ಹುಟ್ಟಿದ ಮಗುವನ್ನು ಕವಿತ ಹೆಚ್ಚು ಪ್ರೀತಿಮಾಡಲು ಶುರುಮಾಡಿದಾಗ ಗೀತಳಿಗೆ ಕಸಿವಿಸಿಯಾಗುತ್ತದೆ. ಇದರಿಂದ ಕವಿತ ಮಗುವಿನಿಂದ ದೂರವಾಗುತ್ತಾಳೆ. ಆದರೆ ವಿಚಿತ್ರ ಸನ್ನಿವೇಶದಲ್ಲಿ ಕವಿತ ಮಗುವನ್ನು ಕಾಪಾಡುವ ಸಂದರ್ಭ ಬರುತ್ತದೆ. ಅಲ್ಲಿಂದ ಮುಂದಕ್ಕೆ ಮೂರೂ ಪಾತ್ರಗಳ ಅಥ್ಯೆಕ್ಯತೆಯಿಂದ ಅವರ ಬದುಕಿನಲ್ಲಿ ನವಪಲ್ಲವ ಪ್ರಾರಂಭವಾಗುತ್ತದೆ.
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE