ಮೃತ್ಯುಂಜಯ

Author : ನಿರಂಜನ

Pages 572

₹ 465.00




Year of Publication: 2018
Published by: ಐಬಿಎಚ್ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085
Phone: 9845070613

Synopsys

ಖ್ಯಾತ ಲೇಖಕ ನಿರಂಜನ ಅವರ ಕಾದಂಬರಿ ‘ಮೃತ್ಯುಂಜಯ’ . ಪ್ರಾಚೀನ ಕಾಲದ್ದೆಲ್ಲವೂ ದಾಯಾದಿ ನಾಗರಿಕತೆಗಳೇ, ವಿಶ್ವದ ಎಲ್ಲ ಜನರೂ ಸೋದರ ಸಂಬಂಧಿಗಳೇ. 'ಮೃತ್ಯುಂಜಯ'ದಲ್ಲಿರುವುದು ಆಧುನಿಕ ಮಾನವನ ಪೂರ್ವಜರ ಕಥೆ, ನಮಗೆ ಅದು ಪರಕೀಯವಲ್ಲ. 'ಮೃತ್ಯುಂಜಯ'ದ ಜೀವನ ಚಿತ್ರಣ ಸಂಪೂರ್ಣ ವಾಸ್ತವ, ಧಾರ್ಮಿಕ ವಿಧಿಗಳ ನಿರೂಪಣೆ, ಶವಲೇಪನ ಕ್ರಮ, 'ಶಾಶ್ವತ ಮನೆ'ಗೆ-ಗೋರಿಗೆ-ಪಯಣ, ನಾಣ್ಣುಡಿಗಳು, ಹಾಡುಗಳು-ಎಲ್ಲವೂ ಸಾಧಾರ.

4500 ವರ್ಷ ಹಿಂದೆ ಪ್ರಾಚೀನ ಐಗುಪ್ತದಲ್ಲಿ ಇದ್ದಂಥದೇ ದುಷ್ಟ ಸಮಾಜ ವ್ಯವಸ್ಥೆಯಲ್ಲಿ, ಸ್ಥಿತಿಗತಿಗಳಲ್ಲ-ಅದು ಯಾವ ದೇಶದಲ್ಲೇ ಇರಲಿ, ಯಾವ ಭೂಖಂಡದಲ್ಲೇ ಇರಲಿ-ಚಿನ ಸಿಡಿದೇಳುವುದು ನಿಶ್ಚಯ. ಕೌರ್ಯಮರ್ದನಗಳಿಗೆ ಇದಿರಾಗಿ, ನ್ಯಾಯಕ್ಕೋಸ್ಕರ, ಒಳ್ಳೆಯ ಬದುಕಿಗೋಸ್ಕರ ಜನ ನಡೆಸುವ ಹೋರಾಟಕ್ಕೆ ಸಾವಿಲ್ಲ. ಇಂಥ  ವಿಚಿತ್ರ ಹೋರಾಟವೊಂದರ ಕಥೆಯನ್ನ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. 

 

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books