‘ಮಹಾಕವಿ ಮುದ್ದಣ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಹತ್ತನೆಯ ಶತಮಾನದ ಪ್ರಾರಂಭದಲ್ಲಿಯೇ ತನ್ನ ಬದುಕನ್ನು ಮುಗಿಸಿದ ನಂದಳಿಕೆ ಲಕ್ಷ್ಮೀ ನಾರಾಯಣ ತನ್ನ ಕಾವ್ಯ ರಚನೆಯ ಸೊಗಸಿನಿಂದ ಮತ್ತು ತನ್ನನ್ನು ಪ್ರೀತಿಯಿಂದ ಕರೆಯುತ್ತಿದ್ದ ಮುದ್ದಣ ಎನ್ನುವ ಹೆಸರಿನಿಂದಲೇ ಪ್ರಸಿದ್ಧನಾದ. ತನ್ನಲ್ಲಿ ಅಂತರ್ಗತವಾಗಿದ್ದ ಬಡತನ, ಕೀಳರಿಮೆ ಇವುಗಳಿಂದ ತಾನು ಸ್ವಂತ ಶಕ್ತಿಯಿಂದ ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ, ರಾಮಾಶ್ವಮೇಧ ಮುಂತಾದ ಕಾವ್ಯಗಳನ್ನೂ, ಯಕ್ಷಗಾನ ಕೃತಿಗಳನ್ನೂ ರಚಿಸಿ ಕಡೆಯವರೆವಿಗೂ ಅಜ್ಞಾತನಂತೆಯೇ ಬದುಕಿ ಈ ಕೃತಿಗಳನ್ನು ನಾನು ರಚಿಸಿದ್ದು ಎಂದು ಹೇಳಿಕೊಳ್ಳದೇ ಕ್ಷಯರೋಗಕ್ಕೆ ತುತ್ತಾಗಿ ಬಹಳ ಬೇಗ ಬಾಳು ಮುಗಿಸಿದ. ಮದುವೆಯಾದರೂ ಸಾಂಸಾರಿಕ ಬದುಕಿನಲ್ಲೂ ಅಂಥಾ ಸುಖ ನೆಮ್ಮದಿ ಕಾಣದ ಮುದ್ದಣ ತನ್ನ ಮಗ ಒಂದು ವರ್ಷದವನಾಗಿರುವಾಗಲೇ ಇಹಲೋಕ ತ್ಯಜಿಸುತ್ತಾನೆ. ಇಂಥಾ ನಂದಳಿಕೆ ಲಕ್ಷ್ಮೀ ನಾರಾಯಣ ಉರುಫ್ ಮುದ್ದಣನ ಬದುಕಿನ ಒಂದೊಂದು ಎಳೆಯನ್ನೂ ಜೊತೆಗೆ ಅವನ ಕಾವ್ಯದ ಅನೇಕ ವಿವರಗಳನ್ನೂ ಬಿಡಿಸಿರುವ ಅಪರೂಪದ ಕೃತಿ ಮಹಾಕವಿ ಮುದ್ದಣ ಈಗಾಗಲೇ ಮೂರು ಮುದ್ರಣಗಳನ್ನು ಕಂಡಿದೆ .
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE