‘ಮಹಾ ವಿನಾಶ’ ಕೃತಿಯು ಲಕ್ಷ್ಮಣ ಕೌಂಟೆ ಅವರ ಐತಿಹಾಸಿಕ ಕಾದಂಬರಿಯಾಗಿದೆ. ಬುದ್ಧನ ನಂತರದ ಮೌರ್‍ಯ ಸಾಮ್ರಾಜ್ಯದ ಅವನತಿಯ ಕುರಿತ ಕಥಾಹಂದರ. ಬುದ್ಧನ ಕಾಲಾನಂತರದ ಕಥೆಯುಳ್ಳ, ಹೆಚ್ಚು ಬಳಸಲ್ಪಡದ ಕಥಾವಸ್ತುವನ್ನು ಹೆಣೆದುಕೊಂಡು ಅಧ್ಯಯನದ ಮುಖಾಂತರವೇ ರಚಿಸಲ್ಪಟ್ಟ ಈ ಕೃತಿಯು ಗೌತಮಬುದ್ಧನ ಪರಿನಿರ್ವಾಣದ ನಂತರದ ಕಾಲದಿಂದ ಮುಂದಿನ ಐದಾರು ನೂರು ವರ್ಷದ ಕಥಾ ಹಂದರವನ್ನು ಹೊಂದಿದೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE