’ಮೇಡಮ್ಮನ ಗಂಡ’ ಸ್ವಾತಂತ್ಯ್ರಪೂರ್ವದಲ್ಲಿ ಜೀವಿಸಿರಬಹುದಾದ; ಶೋಷಣೆಯನ್ನೇ ತನ್ನ ಜಾಣತನದಿಂದ ಹುರಿದುಮುಕ್ಕುವ ಹೆಣ್ಣೊಬ್ಬಳ ಕತೆ. ಸುಶೀಲೆಯನ್ನು ಆಕೆಯ ಪೋಷಕರು ವೃದ್ಧನೊಬ್ಬನಿಗೆ ಧಾರೆ ಎರೆದುಕೊಟ್ಟಿರುತ್ತಾರೆ. ಪೋಷಕರಿಗೋ ಧನದಾಹ. ಮತ್ತೆ ಆಕೆಯನ್ನು ಇನ್ನೊಬ್ಬನಿಗೆ ಮದುವೆ ಮಾಡಿಕೊಡಲು ಯತ್ನಿಸುತ್ತಾರೆ. ಆದರೆ ದಿಟ್ಟ ಸ್ವಭಾವದ ಆಕೆ ತನ್ನ ವೃದ್ಧ ಗಂಡನನ್ನು ತೊರೆಯಲು ಇಷ್ಟಪಡುವುದಿಲ್ಲ ಬದಲಿಗೆ ಶಿಕ್ಷಕಿಯಾಗಿ ರೂಪುಗೊಳ್ಳುತ್ತಾಳೆ. ಆದರೂ ಆಕೆ ಒಂದು ರೀತಿಯಲ್ಲಿ ವಿಮೋಚನೆ ಪಡೆದರೂ ಪರಾಧೀನತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಧ್ವನಿಯೂ ಕಾದಂಬರಿಯಲ್ಲಿದೆ.
ಹಾಗೆಂದು ಕತೆ ಕೇವಲ ಸುಶೀಲೆಯ ಸುತ್ತಲೇ ಸುತ್ತುವುದಿಲ್ಲ. ಎಷ್ಟೋ ಕೊಲೆಗಳನ್ನು ಮಾಡಿಸಿದ ಮಡಕಸಿರದ ವೆಂಕಟರೆಡ್ಡಿ ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರ. ಹಾಗೆ ಕೊಲೆಗಳನ್ನು ಮಾಡಿಸಿ ಮೇಲೆ ಬರುವ ವೆಂಟಕರೆಡ್ಡಿ ತನ್ನ ನಂಬಿಕಸ್ಥ ಬಂಟನೊಬ್ಬನಿಂದಲೇ ಹತ್ಯೆಗೀಡಾಗುತ್ತಾನೆ. ಒಳ್ಳೆಯದು- ಕೆಟ್ಟದರ ನಡುವೆ ಒಳ್ಳೆಯದನ್ನೇ ಆಯ್ದುಕೊಳ್ಳಬೇಕೆಂಬ ಸಂದೇಶ ಇದರಲ್ಲಿದೆ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE