'ಸುಬೇದಾರರ ಪ್ಯಾದೇ ಮಾತು', 'ಸೋರಲೀ ಪ್ರಸಂಗ' ಎಂಬ ಕತೆಗಳಲ್ಲಿ ಕಾಣುವ ರಾಮಣ್ಣ ಎಂಬ ಜಾಣ ಗ್ರಾಮವಾಸಿ ಹಿರಿಯಾತ ನನ್ನ ಮನಸ್ಸಿನಲ್ಲಿ ಆಮೇಲಿನ ದಿನಗಳಲ್ಲಿ ಒಂದು ದೊಡ್ಡ ಆಕಾರವನ್ನು ಪಡೆದು ಬೆಳೆದವರ ಜೀವನದ ಅನುಭವಗಳನ್ನು ಹೇಳಿಸಿ, ಕೇಳಿ, ವರದಿ ಮಾಡಿದರೆ ಒಂದು ಸ್ವಾರಸ್ಯವಾದ ಪ್ರಸಂಗ ಆದೀತು ಎಂದು ತೋರಿ ಈ ಪುಸ್ತಕವನ್ನು ಬರೆಯಲು ಆರಂಭಿಸಿದರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್. ರಾಮಣ್ಣನ ವ್ಯಕ್ತಿ ದಿಟ್ಟತನದಲ್ಲಿ ಪುಸ್ತಕ ಚೇತನದ ಒಂದು ಭಾಗವಾಗಿದ್ದಾರೆ. ಕಾಲದಿಂದ ಬೇರ್ಪಟ್ಟ ಕೆಲ ದಶಕಗಳ ಕಾಲಮಾನದ ಜೀವನ ಸಮಾಜ ವ್ಯವಸ್ಥೆ, ಅವಕ್ಕೆ ಬೆನ್ನೆಲುಬಾದ ಸಾಂಪ್ರದಾಯಿಕ ಮೌಲ್ಯಗಳು, ಆಡಳಿತದ ವೈಖರಿ, ಕಾರ್ಯಕ್ಷಮತೆ ಸೊಗಸಾಗಿ ಮೂಡಿವೆ. ಆಳ್ವಿಕೆಗಾರರ ಕುಂದುಕೊರೆಗಳು, ಕೊಪಿ - ಪ್ರಾಂತೀಯ ಭಾವನೆಯ ಕೆಲ ಮಾದರಿಗಳು, ಕಾಮಿನಿ ಕಾಂಚನದ ಆಮಿಷ, ಲಂಚ ಪ್ರಭಾವ, ಅಧಿಕಾರ ಪ್ರಾಪ್ತಿಯಲ್ಲಿ ವ್ಯಕ್ತಪಡಿಸಿದ ಆತ್ಮಾಭಿಮಾನ ಮತ್ತು ವೈದ್ಯ ವ್ಯವಹಾರ ಜಗತ್ತಿನ ಹಲವು ಹನ್ನೊಂದು ತೆರನಾದ ಸೂಕ್ಷ್ಮ ಮೋಸ, ಬಿಳಿಯರ ಆಳ್ವಿಕೆ ಕೊನೆಗೊಳ್ಳುವ ಮುಂಚಿನ ನಾಲೈದು ದಶಮ ವಿಹರಿಸಿ ಹೊಸಬನಾಗಿ ಮರಳಿಸುವ ಕೃತಿ. ಮಾಸ್ತಿಯವರು ಜೀವನದಲ್ಲಿ ಕಂಡ, ಕೇಳಿದ, ಹತ್ತಾರು ಸಂಗತಿಗಳು, ಜೀವನಾನುಭವಗಳು ಇಲ್ಲಿ ಅಭಿವ್ಯಕ್ತಿಸಿದ್ದಾರೆ.
‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 1985