ರಾಮಾಯಣದ ರಾಮ, ರಾವಣ, ವಾಲಿ ಹಾಗೂ ಸುಗ್ರೀವರಿಗೆ ಸಂಬಂಧಿಸಿದ ರೂಪಕ ಕಥನವನ್ನು ಲೇಖಕ ಲಕ್ಷ್ಮಣ ಕೌಂಟೆ ಅವರು ಕಾದಂಬರಿಯಾಗಿಸಿದ್ದಾರೆ. ಲೇಖಕರೇ ಹೇಳುವ ಹಾಗೆ, ಕಾದಂಬರಿಯಲ್ಲಿ ಅಯೋಧ್ಯಾ ಕಾಂಡದ ಪ್ರಸ್ತಾಪವಿಲ್ಲ. ಲಂಕೆ ಮತ್ತು ಕಿಷ್ಕಿಂದೆ ಮಾತ್ರ ಮನುಷ್ಯನ ದ್ವೇಷ-ವಿಶ್ವಾಸ-ಆಸೆ-ಸ್ನೇಹ-ವೈಮನಸ್ಸು ಇತ್ಯಾದಿಗಳು ರಾಮಾಯಣದ ಪಾತ್ರಗಳ ಮೂಲಕ ನೋಡಲಾಗಿದೆ. ಕೇವಲ ರಾಮಾಯಣದ ಪಾರಾಯಣವಲ್ಲ ಎಂದೇ ಲೇಖಕರು ಸ್ಪಷ್ಟಪಡಿಸಿದ್ದು, ಈ ಕಥೆಯ ಮೂಲಕ ಹೊಸ ಚಿಂತನೆಗಳಿಗೆ-ಆಶಯಗಳಿಗೆ ದಾರಿ ಮಾಡಿಕೊಟ್ಟಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE