ಕನಸು-ವಾಸ್ತವಗಳೆರಡರಲ್ಲೂ ಜೀಕುವ ಒಬ್ಬ ಸಾಹಿತಿ ಮತ್ತು ಮಾಯಾಂಗನೆಯೂ ಮಾಯಾವಿಯೂ ಆಗಿ ಕಾಣುವ ಅಬಲೆಯ ಚಿತ್ರಣ ’ಕಾಣದ ಸುಂದರಿ’. ಮೇಲ್ನೋಟಕ್ಕೆ ಪಿಶಾಚಿಯ ಕತೆಯಂತೆ ತೋರಿದರೂ ಹೆಣ್ಣೊಬ್ಬಳ ಯಾತನೆಗಳನ್ನೇ ಅಲ್ಲಿ ಕಟೆಯಲಾಗಿದೆ. ತನ್ನ ಮಾವನಿಂದಲೇ ಶೀಲ ಕಳೆದುಕೊಳ್ಳುವ ಸುಂದರಿ ಸಂಬಂಧಿಕರ ಚಿತ್ರಹಿಂಸೆಗೆ ಮತ್ತಷ್ಟು ಹೈರಾಣಾಗುತ್ತಾಳೆ. ಆದರೆ ಆಕೆಗೆ ಯಾವ ಸಂಬಂಧಿಕನೂ ಅಲ್ಲದ ಸಾಹಿತಿ ಅವಳನ್ನು ಮಗಳಂತೆ ಕಾಣುತ್ತಾನೆ.
ಇಂತಹ ವೈರುಧ್ಯದ ಪಾತ್ರಗಳು ಓದುಗರ ಮನಸ್ಸಿನಲ್ಲಿ ಎಬ್ಬಿಸುವ ಅಲೆ ಮೆಚ್ಚುಗೆಗೆ ಪಾತ್ರವಾಗದೇ ಇರದು.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE