ಸಾತ್ವಿಕತೆ ಹಾಗೂ ದುರುಳತೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತು ಸೆಣೆಸುವ ಕತೆ ಇದು. ಸದ್ಗುಣಗಳು ಮೈವೆತ್ತಂತಿರುವ ಸುಬ್ಬಣ್ಣ- ಶಂಕ್ರಮ್ಮ ದಂಪತಿಯ ಮಗ ಕಾಂಮಣ್ಣ ಮಾತ್ರ ದುರ್ಬುದ್ಧಿಯ ಮೂರ್ತರೂಪ.
ಕಾನೂನು ಪದವಿ ಮುಗಿಸಿ ಊರಿಗೆ ಬರುವ ಆತ ತನ್ನ ವಿದ್ಯೆ- ಬುದ್ದಿಯನ್ನು ಬಳಸುವುದು ಕುಟುಂಬದ ವಿರುದ್ಧ. ಸ್ವೇಚ್ಛಾಚಾರವೇ ಅವನ ಬದುಕು. ಮಗ ಹಾದಿ ತಪ್ಪಿದ ದುಃಖದಲ್ಲೇ ತಂದೆ- ತಾಯಿ ತೀರಿಕೊಳ್ಳುತ್ತಾರೆ. ಮುಂದೆ ಅಂದಾದುಂದಿ ರಾಜಕೀಯ ಮಾಡಿ ಸಮಾಜದಲ್ಲಿ ಮೇಲೆ ಬರಲು ಕಾಂಮಣ್ಣ ಹವಣಿಸುತ್ತಾನೆ. ಅವನ ಹಾವಳಿಗೆ ಸಿಕ್ಕು ನಲಗುವವರು ಒಬ್ಬಿಬ್ಬರಲ್ಲ.
ಕೌಟುಂಬಿಕ ಬದುಕು ಮತ್ತು ರಾಜಕೀಯವನ್ನು ಹತ್ತಿರದಿಂದ ದಿಟ್ಟಿಸುವ ಕೆಲಸವನ್ನು ಬೀchi ಕೃತಿಯಲ್ಲಿ ಮಾಡಿದ್ದಾರೆ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE