ಹಾಸ್ಯ ಸಾಹಿತಿ ಬೀಚಿಯವರ ಕಾದಂಬರಿ ’ಕಲ್ಲು ಹೇಳಿತು’. ಈ ಕಾದಂಬರಿಯಲ್ಲಿ ಬೀಚಿಯವರು ತಮ್ಮ ಎಂದಿನ ಸರಸ-ಸರಳ ಮನರಂಜನಾತ್ಮಕ ರೀತಿಯಲ್ಲಿ ಕತೆ ಹೇಳಿದ್ದಾರೆ. ಕಾದಂಬರಿಯ ಓದಿನುದ್ದಕ್ಕೂ ಓದುಗನ ಮುಖದಲ್ಲಿ ನಗೆಯೊಂದು ಕಾಣಿಸದೇ ಇರದು. ಬೀಚಿಯ ಬರವಣಿಗೆಯ ಸ್ಯಾಂಪಲ್ ಈ ಪುಸ್ತಕದಲ್ಲಿದೆ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE