ಕುಟುಂಬದೊಳಗೆ ನಡೆಯುವ ಹೆಣ್ಣಿನ ಶೋಷಣೆ, ಅದರಿಂದ ಹೊರಬರಲು ಆಕೆ ಆಯ್ದುಕೊಳ್ಳುವ ಮಾರ್ಗ, ಅದರಿಂದ ಆಕೆ ಕಾಣುವ ವಿಮೋಚನೆಯನ್ನು ಹೇಳುತ್ತದೆ ’ಹೆಣ್ಣು ಕಾಣದ ಗಂಡು’.
ಕೌಟುಂಬಿಕ ಕತೆ ಅನ್ನಿಸಿದರೂ ರಾಜಕಾರಣಿಗಳು, ಅಧಿಕಾರಿಗಳು ಒಂದು ಸಂಸಾರದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಮನೋಜ್ಞವಾಗಿ ಕಾದಂಬರಿ ಹೇಳುತ್ತದೆ.
’ಗಾಂಧಿ ಮಕ್ಕಳ ಹಿಂದಿ ಶಾಲೆ’ ತೆರೆಯುವ ಮೂಲಕ ರತ್ನ ಹೇಗೆ ಸ್ವಾಭಿಮಾನದ ಬದುಕು ಸಾಗಿಸುತ್ತಾಳೆ ಅವಳು ಎದುರಿಸಿದ ಸವಾಲುಗಳು ಯಾವುವು ಎಂದು ಕೃತಿ ವಿವರಿಸುತ್ತ ಸಾಗುತ್ತದೆ. ಮತ್ತೊಂದು ಪ್ರಮುಖ ಪಾತ್ರ ಗಣಪ್ಪನಿಗೆ ಹೆಣ್ಣಿನ ಸಂಗದ ಅರಿವಿಲ್ಲದಿದ್ದರೂ ಹೆಣ್ಣು-ಗಂಡಿನ ಪ್ರೀತಿ ನೈಸರ್ಗಿಕವಾದುದು ಎಂಬುದನ್ನು ಕತೆ ಹೇಳುತ್ತದೆ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE