ಎಂಥಾ ಪ್ರೇಮವಯ್ಯಾ

Author : ಬೇಲೂರು ರಾಮಮೂರ್ತಿ

Pages 200

₹ 54.00




Year of Publication: 1997
Published by: ಸುಘೋಷ ಸಾಹಿತ್ಯ
Address: 53, ಮೊದಲನೇ ಮಹಡಿ, ನವೀನ್‌ ನಿಲಯ 25ನೇ ಅಡ್ಡರಸ್ತೆ, 6ನೇ ಬ್ಲಾಕ್‌, ಜಯನಗರ ಬೆಂಗಳೂರು-560082

Synopsys

‘ಎಂಥಾ ಪ್ರೇಮವಯ್ಯಾ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಪ್ರೀತಿಸಿ ಮದುವೆಯಾದವರೆಲ್ಲಾ ಸುಖವಾಗಿರುತ್ತಾರೆ ಎಂದಲ್ಲ. ಸುಖವಾಗಿರಬೇಕು ಎನ್ನುವ ಬಯಕೆ ಅವರುಗಳಲ್ಲಿದ್ದರೂ ಹೊಂದಾಣಿಕೆಯ ಕಾರಣದಿಂದಾಗಿ ವಿರಸ ಮೂಡುವುದು ಸಹಜ. ರವಿ ಮತ್ತು ಗೀತ, ಹಾಗೂ ಮಧು ಮತ್ತು ಸುಷ್ಮ ದಂಪತಿಗಳಲ್ಲಿ ಈ ರೀತಿಯ ಹೊಂದಾಣಿಕೆ ಇರುವುದಿಲ್ಲ. ಮೊದಲು ಮಧು ಮತ್ತು ಸುಷ್ಮ ಹೊಂದಾಣಿಕೆಯಿಂದ ಇದ್ದರೆ ರವಿ ಗೀತ ಜಗಳವಾಡುತ್ತಿರುತ್ತಾರೆ. ಕೆಲವು ದಿನಗಳಲ್ಲಿ ಬದುಕು ಅರ್ಥ ಮಾಡಿಕೊಂಡ ರವಿ ಗೀತ ಹೊಂದಾಣಿಕೆ ಮಾಡಿಕೊಂಡರೆ ಮಧು ಮತ್ತು ಸುಷ್ಮ ಬಾಳಿನಲ್ಲಿ ಬಿರುಗಾಳಿ ಏಳುತ್ತದೆ. ಇಬ್ಬರೂ ಜೋಡಿಗಳು ಸುಖವಾಗಿದ್ದಾರೆ. ಸುಖಕ್ಕಾಗಿ ಅವರುಗಳು ಮಾಡಿದ ತ್ಯಾಗ ಏನು, ಅದರ ಮಹತ್ವ ಏನು ಎಂದು ಸಾರುವ ಕೃತಿ ಎಂಥಾ ಪ್ರೇಮವಯ್ಯಾ

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books