`ದುಷ್ಕೃತ್ಯ’ ಕೃತಿಯು ಗಿರಿಮನೆ ಶ್ಯಾಮರಾವ್ ಅವರ ಮನೋ ವೈಜ್ಞಾನಿಕ ಸರಣಿಯ ಮೂರನೇಯ ಕಾದಂಬರಿಯಾಗಿದೆ. ಈ ಕೃತಿ ಕುರಿತು ಲೇಖಕರು ಹೀಗೆ ಹೇಳಿದ್ದಾರೆ; ಒಂದು ಸಮಾಜದ ಸುಸ್ಥಿತಿಗೆ ಅಲ್ಲಿರುವ ಎಲ್ಲರೂ ವಿದ್ಯಾವಂತರಾಗಿರಬೇಕು, ಸಮಾನರಾಗಿರಬೇಕು, ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು, ಎಲ್ಲರಿಗೂ ಒಂದಿಷ್ಟಾದರೂ ಆರ್ಥಿಕ ಧೃಡತೆ ಬೇಕು. ಆಗ ಅಷ್ಟು ಬೇಗ ಮನಸ್ಸು ವಿಕೃತಗೊಳ್ಳುವುದಿಲ್ಲ. ದುರದೃಷ್ಟವೆಂದರೆ ದುಷ್ಟರಿಂದ ನೋವು ಅನುಭವಿಸುವವರು ಮಾತ್ರ ಮುಗ್ಧರೂ ಬಡವರೂ ಆಗಿರುತ್ತಾರೆ. ಏಕೆಂದರೆ ಬಲಿಷ್ಠರ ತಂಟೆಗೆ ದುಷ್ಟರು ಹೋಗುವುದೇ ಇಲ್ಲ! ಮರ್ಯಾದೆಯೇ ಬದುಕು ಎಂದುಕೊಂಡವರಿಗೆ ಅತ್ಯಾಚಾರ ಮತ್ತು ಕೊಲೆಗಳಂಥಾ ಕೃತ್ಯಗಳೆಲ್ಲಾ ಅದೆಷ್ಟು ಘಾಸಿಗೊಳಿಸುತ್ತದೆಂದರೆ ಅದನ್ನು ಮಾಡಿದವರಿಗೆ ಅವರ ನೋವಿನ ಕಲ್ಪನೆ ಎಳ್ಳಷ್ಟೂ ಇರುವುದಿಲ್ಲ. ಬದಲಿಗೆ ವಿಕೃತಾನಂದ ಇರುತ್ತದೆ. ಈ ಎಲ್ಲದರ ಪರಿಣಾಮ ಅನುಭವಿಸಿಯೂ ಮೇಲೆದ್ದು ಬರುವ ಸಾಮಾನ್ಯ ಎಂದುಕೊಂಡ ಅಸಾಮಾನ್ಯ ಯುವತಿಯ ಕತೆಯೇ ದುಷ್ಕೃತ್ಯ. ಹಾಗೆ ಮೇಲೇಳಲು ಸಾಧ್ಯವಾಗುವುದು ಅವರೊಳಗೆ ಅಡಗಿದ ಸುಪ್ತ ಪ್ರತಿಭೆಯಿಂದ! ಮತ್ತು ಅದಕ್ಕೆ ಕಾರಣವಾಗುವುದು ಸಹೃದಯರ ಉತ್ತೇಜನ! ದುಷ್ಕೃತ್ಯದಿಂದ ನೋವುಂಡವರು ಅನುಭವಿಸುವ ಆಘಾತದ ಪರಿಣಾಮದ ಜೊತೆಗೆ ಅಂತಹಾ ಕೃತ್ಯ ಎಸಗುವವರ ಬದುಕಿನ ಹಿನ್ನೆಲೆಯ ಬಗ್ಗೆ ಕೂಡಾ ತಿಳಿಸುವ ಪ್ರಯತ್ನ ಈ ಕಾದಂಬರಿಯಲ್ಲಿದೆ. ಹಾಗಾಗಿ ಇದೊಂದು ಮನೋವೈಜ್ಞಾನಿಕ ಕಾದಂಬರಿ ಮತ್ತು ಆ ಸರಣಿಯ ಮೂರನೆಯ ಕೃತಿ ಎಂದು ತಿಳಿಸಿದ್ದಾರೆ.
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...
READ MORE