ʼಢುoಢೀ; ಅರಣ್ಯಕನೊಬ್ಬ ಗಣಪತಿಯಾದ ಕಥೆʼ ಕಾದಂಬರಿಯನ್ನು ಲೇಖಕ ಯೋಗೇಶ್ ಮಾಸ್ಟರ್ ರಚಿಸಿದ್ದಾರೆ. ಆದಿವಾಸಿ ಸಮಾಜದಿಂದ ಆಯ್ದುಕೊಂಡ ಲಕ್ಷಣಗಳು, ಅಚಾರ ವಿಚಾರಗಳು,ಪದ್ಧತಿಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಇಲ್ಲಿನ ಕತೆ ಕಾಲ್ಪನಿಕವಾಗಿದ್ದರೂ ಜನರಿಗೆ ಸಂಬಂಧಿಸಿದ ಸತ್ಯಗಳು ಅಡಗಿಕೊಂಡಿವೆ. ಗನಪತಿ ಅರಣ್ಯ ಜನರಿಂದ ಅರಾಧಿಸಲ್ಪಟ್ಟ ದೇವತೆ. ಹೀಗಾಗಿ ಅರಣ್ಯದ ಜನರ ನಡುವೆ ಕತೆಯು ಸಾಗುತ್ತದೆ. ಗಣಪತಿಯ ಬಗೆಗೆ ಇಂಗ್ಲೀಷ್ ಹಾಗೂ ಕನ್ನಡದಲ್ಲಿರುವ ಹಲವಾರು ಸಾಹಿತ್ಯಗಳನ್ನು ಸಂಗ್ರಹಿಸಿ ಈ ಕಾದಂಬರಿಯನ್ನು ರಚಿಸಲಾಗಿದೆ ಎಂದು ಈ ಕೃತಿಯ ಮುನ್ನುಡಿಯಲ್ಲಿ ವಿವರಿಸಲಾಗಿದೆ. ಪುರಾಣದ ರೋಚಕತೆಯ ಜೊತೆಗೆ ಸಂಶೋಧನಾ ಸಾಹಿತ್ಯವನ್ನೂ ಮಿಶ್ರಿಸಿ ಲೇಖಕ ಯೋಗೇಶ್ ಮಾಸ್ಟರ್ ಕಥೆ ಹೆಣೆದಿದ್ದಾರೆ.
ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ...
READ MORE