ದೂರದ ನಕ್ಷತ್ರ-ನಿರಂಜನ ಅವರ ಕಾದಂಬರಿ. 1954ರಲ್ಲಿ ಧನಾ ಪ್ರಕಾಶನ ಪ್ರಕಟಿಸಿದ್ದರೆ 1956ರಲ್ಲಿ ಸಾಧನಾ ಪ್ರಕಾಶನದಿಂದ ದ್ವಿತೀಯ ಮುದ್ರಣ ಕಂಡಿತ್ತು. ಶಿಕ್ಷಣ ಕ್ಷೇತ್ರದ ಮಹತ್ವ ಮಾತ್ರವಲ್ಲ; ಅಲ್ಲಿಯ ನ್ಯೂನತೆ, ದೋಷ ಹಾಗೂ ವೈಫಲ್ಯಗಳು ಕಾದಂಬರಿ ಉದ್ದಕ್ಕೂ ಧ್ವನಿಸುತ್ತವೆ.
ಮೈಸೂರು ಸಂಸ್ಥಾನದ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಮ್ಮೇಳನವು ಬೆಂಗಳೂರಿನಲ್ಲಿ ಜರುಗಿದ್ದು, ಅಲ್ಲಿ ಪಾಲ್ಗೊಂಡ ಲೇಖಕರು ಶಿಕ್ಷಕರ, ಶಿಕ್ಷಣ ಕ್ಷೇತ್ರದ ವೈಫಲ್ಯಗಳನ್ನು ತಿಳಿದು ಅದನ್ನೇ ಕಾದಂಬರಿಯ ವಸ್ತುವಾಗಿಸಿದ್ದಾಗಿ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ.
ಕಾದಂಬರಿಯ ಒಟ್ಟು ಚಿತ್ರಣ ನೀಡುವ ಸಾಲುಗಳು ಹೀಗಿವೆ; ‘ಜಯದೇವನೋ ಭ್ರಮೆ ಇಟ್ಟುಕೊಂಡೇ ಬಂದಿದ್ದ. ಅನನ್ಯ ಭಕ್ತಿಯಿಂದ. ಆದರೆ, ಬಾಗಿಲು ಎಂದು ಭಾವಿಸಿ ಒಳನುಗ್ಗಿದಲ್ಲೇ ಬಂಡೇಕಲ್ಲು ಮೆಲ್ಲನೆ ಮೂಗಿಗೆ ಸೋಂಕಿತ್ತು....’ ಆದರೆ, ಆತ ನಿರಾಶನಾಗಲಿಲ್ಲ..‘ಹಾದಿಯನ್ನು ನಾನು ಬಲ್ಲೆ, ಗುರಿ ಸೇರಲು..’ ಆತ್ಮವಿಶ್ವಾಸದಿಂದ ಒಳದನಿ ಉಸುರುತ್ತಿತ್ತು...’ ಶಿಕ್ಷಣ ಕ್ಷೇತ್ರವನ್ನು ಕಣ್ಣಿನಂತೆ ಜೋಪಾನ ಮಾಡಿಕೊಂಡು ಬರಬೇಕು ಎನ್ನುವ ಎಚ್ಚರಿಕೆಯೂ ಕಾದಂಬರಿಯ ಸಂದೇಶವಾಗಿದೆ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE