ಲೇಖಕ ಲಕ್ಷ್ಣಣ ಕೌಂಟೆ ಅವರು ಮಂಟೇಸ್ವಾಮಿ ಕುರಿತು ರಚಿಸಿದ ಕಾದಂಬರಿ ʻಧರೆಗೆ ದೊಡ್ಡವರುʼ. ಕತ್ತಲ ರಾಜ್ಯದಲ್ಲಿ ಬೆಳಕು ಪಸರಿಸಿದ, ಜ್ಯೋತಿರ್ಲಿಂಗಯ್ಯ ಎಂದೂ, ಅಲ್ಲಮಪ್ರಭುವಿನ ಅವತಾರಿ ಎಂದೂ ಜನ ಸಾಮಾನ್ಯರಿಂದ ಕರೆಯಿಸಿಕೊಂಡು ನೀಲಗಾರ ಪರಂಪರೆಯನ್ನು ಸೃಷ್ಟಿಸಿದ ಮೈಸೂರು ಭಾಗದ ಪ್ರಮುಖ ಸಂತ ಮಂಟೇದಲಿಂಗಯ್ಯ. ಅವರನ್ನು ಅಧ್ಯಯನ ಮಾಡಿ ಪ್ರಸ್ತುತ ಕೃತಿಯನ್ನು ತಂದಿದ್ದಾರೆ. ಜಾತಿಗಳು ರಾಜಕೀಯ ಶಕ್ತಿಗಳಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಧರ್ಮಾತೀತವಾದ ಸಿದ್ದ, ಸೂಫಿ, ಶರಣ ಸಂತರಾದ ಮಂಟೇಸ್ವಾಮಿ ತತ್ವವನ್ನು ತಿಳಿಯಲು ಈ ಕೃತಿ ದಾರಿಮಾಡಿಕೊಡುತ್ತದೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE