ಬೀchiಯವರು ಮೊದಲ ಕಾದಂಬರಿ ’ದಾಸಕೂಟ’. ಬೀಚಿಯವರೇ ಖುದ್ದು ಕಂಡ ಹಲವು ಘಟನೆಗಳೇ ಸುಂದರವಾಗಿ ಹೆಣೆದುಕೊಂಡು ಬಂದ ಕೃತಿ ಇದು. ಇಲ್ಲಿ ಹಾಸ್ಯ ಮಾತ್ರವಲ್ಲ ವಿಚಾರವೂ ಹೇರಳವಾಗಿ ತುಂಬಿರುವುದನ್ನು ಸಾಹಿತಿ ಅ.ನ.ಕೃ ಹೇಳಿಕೊಂಡಿದ್ದಾರೆ. ದಶಕಗಳ ಹಿಂದಿನ ಕಮಲಾಪುರ ಮತ್ತು ಬಳ್ಳಾರಿ ಜಿಲ್ಲೆ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ.
ಕೆಲವರು ಕಾಮನೆಗಳಿಗೆ ದಾಸರಾದರೆ ಇನ್ನೂ ಕೆಲವರು ಒಳ್ಳೆಯತನಕ್ಕೆ ದಾಸರು. ಹಾಗಾಗಿ ಇಡೀ ಜಗತ್ತೇ ಬೀchi ಅವರ ಕಣ್ಣಲ್ಲಿ ಕಂಡುಬಂದರೆ, ದಾಸ್ಯ ವಿಮುಕ್ತಿ ಹೊಂದಿದ ಭಾರತ, ದಿಕ್ಕುತಪ್ಪಿದ ದೇಶಭಕ್ತರಿಂದಾಗಿ ದಾಸ್ಯದಿಂದ ನಿಜವಾಗಿಯೂ ಬಿಡಿಸಿಕೊಂಡಿತೆ ಎಂಬುದನ್ನೂ ಕೃತಿ ವಿಶ್ಲೇಷಿಸುತ್ತದೆ
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE