‘ಚಿಕವೀರ ರಾಜೇಂದ್ರ' ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು.
'ನಾಡಿ ಪರೀಕ್ಷೆಯಿಂದ ಇಡೀ ದೇಹದ ಸ್ಥಿತಿ ತಿಳಿಯಬಲ್ಲಂಥ ಮಾಸ್ತಿಯವರ ಸೂಕ್ಷ್ಮ ಕಲೆ ವಿಶ್ವ ಸಾಹಿತ್ಯದಲ್ಲಿ ಒಂದು ಒಳ್ಳೆಯ ಕೃತಿಯೆನ್ನಿಸುವ ಚಿಕವೀರ ರಾಜೇಂದ್ರ'ವನ್ನು ನಮಗೆ ಕೊಟ್ಟಿದೆ ಎನ್ನಬಹುದು' ಎಂದು ಡಾ. ಯು. ಆರ್. ಅನಂತಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ.
ಮಾಸ್ತಿಯವರನ್ನು ಬ್ರಿಕ್ಸ್, ಥಾಮಸ್ಮನ್, ಕಾಫ್ಯಾ, ಕಮ್ರ, ಬಸವ, ಆರ್ವಲ್, ಯೇಟ್ಸ್ ಮುಂತಾದವರ ಸಾಲಿಗೂ ಸೇರಿಸಿದ್ದಾರೆ. ಕಾದಂಬರಿಯ ಕೆಲವು ಭಾಗಗಳಲ್ಲಿ ಮಾಸ್ತಿಯವರ ಬರವಣಿಗೆ ಶೇಕ್ಸ್ಪಿಯರನ ಮಟ್ಟದ್ದು ಎಂದು ಕೀರ್ತಿನಾಥ ಕುರ್ತಕೋಟಿಯವರೂ, ಕೆ. ಪಿ. ವಾಸುದೇವನ್ ಅವರೂ ಹೇಳಿದ್ದಾರೆ.
‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...
READ MORE