ಚಿಕ್ಕಮಗಳೂರು ಜಿಲ್ಲೆಯ ಸೋಮನಕಾಡು, ವಸ್ತಾರೆ, ಜಾಗರ, ಬಲ್ಲಾಳರಾಯನದುರ್ಗ ಇಂತಹ ಸ್ಥಳಗಳ ಐತಿಹಾಸಿಕ ಮಾಹಿತಿಯನ್ನು ತಾವಲ್ಲಿ ಸರ್ಕಾರಿ ನೌಕರಿಯಲ್ಲಿದ್ದಾಗ (1920-21) ತಿಳಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಬಲ್ಲಾಳರಾಯುನ ದುರ್ಗದ ವೀರಮ್ಮಾಜಿ, ಚೆನ್ನಬಸವ ನಾಯಕ ಇವರ ಬಗ್ಗೆ ಬರೆಯಬೇಕು ಎನಿಸಿದ್ದೇ ’ಚೆನ್ಬಸವ ನಾಯಕ’ ಐತಿಹಾಸಿಕ ಕಾದಂಬರಿ ರಚನೆಗೆ ಮೂಲ ಪ್ರೇರಣೆಯಾಗಿದ್ದು ಎಂದು ಕೃತಿಯ ಪ್ರಸ್ತಾವನೆಯಲ್ಲಿ ಮಾಸ್ತಿ ಅವರು ತಿಳಿಸಿದ್ದಾರೆ. ಘನವ್ಯಕ್ತಿತ್ವದ ಮೂಲಕ ಚೆನ್ನಬಸವ ನಾಯಕನು ಹೇಗೆ ಜನಮಾನಸದಲ್ಲಿ ಸಂಪ್ರದಾಯವಾಗಿ ಉಳಿದು ಬರುತ್ತಿದ್ದಾನೆ ಎನ್ನುವುದನ್ನು ಹೃದಯಂಗಮವಾಗಿ ಚಿತ್ರಿಸಿದ ಕಲೆ, ಈ ಕಾದಂಬರಿಯನ್ನು ಸುಗಮವಾಗಿ ಓದಿಸಿಕೊಂಡು ಹೋಗುತ್ತದೆ.
‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...
READ MORE