ಚಾಲಕನೊಬ್ಬನ ನೈಜ-ಕತೆ ಹೇಳುವ ಬೀchiಯವರ ಕಾದಂಬರಿ ’ಬೆಂಗಳೂರು ಬಸ್’ ಸಂಸಾರದ ನೌಕೆ ಸಾಗಬೇಕಾದ ದಿಕ್ಕನ್ನು ಸೂಚಿಸುತ್ತದೆ.
ಕತೆಯ ಪ್ರಮುಖ ಪಾತ್ರ ಕೇಶವರಾಯ ವೃತ್ತಿಯಿಂದ ಬಸ್ ಚಾಲಕ. ಆದರೆ ದುಶ್ಚಟಗಳು ಅವನನ್ನು ಸರ್ಪದಂತೆ ಸುತ್ತುವರಿದಿವೆ. ಕೌಟುಂಬಿಕ ಕಲಹದಿಂದಾಗಿ ಸಂಸಾರದಿಂದ ದೂರವಾಗುವ ಈತನಿಗೆ ಆಸರೆಯಾಗಿ ದೊರೆಯುವುದು ಬಸವಿ ಎಂಬ ವೇಶ್ಯೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವೇಶ್ಯಾವೃತ್ತಿಗೆ ಇಳಿದರೂ ಆಕೆ ಸಾಧ್ವಿ. ಆಕೆ ಆತನ ಬಾಳಲ್ಲಿ ಬಂದ ನಂತರ ಆಗುವ ಬದಲಾವಣೆಗಳೇನು? ಒಳ್ಳೆಯವರ ಬದುಕಿನಲ್ಲಿ ಕೆಟ್ಟವರಿಂದ ಏರುವ ಬಿರುಗಾಳಿಯಾವುವು ಎಂಬುದನ್ನು ಅರಿಯಲು ಕೃತಿಯನ್ನು ಪೂರ್ಣ ಓದಲೇಬೇಕು.
ವಿಶಿಷ್ಟ ವಸ್ತುವೊಂದರ ಆಯ್ಕೆ, ನಿರೂಪಣಾ ತಂತ್ರ ಹಾಗೂ ಭಾಷಾ ಪ್ರಯೋಗದ ಕಾರಣಕ್ಕೆ ಇದು ಗಮನ ಸೆಳೆಯುವ ಕೃತಿ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE