ನಿರಂಜನ ಅವರ 'ಬನಶಂಕರಿ' ಕಾದಂಬರಿಯು 1954ರಲ್ಲಿ ಮೊದಲ ಮುದ್ರಣವನ್ನು ಕಂಡಿದ್ದು, 2002ರಲ್ಲಿ ನಾಲ್ಕನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯಲ್ಲಿ, ಅಪ್ಪ ಅಮ್ಮನನ್ನು ಕಳೆದುಕೊಂಡು, ಅಜ್ಜಿಯ ಆರೈಕೆಯಲ್ಲಿ ತನ್ನ ಅಣ್ಣನೊಂದಿಗೆ ಬೆಳೆದ ಒಂದು ಹೆಣ್ಣಿನ ಕಥೆ ಇದೆ. ಅವಳು ಹನ್ನೊಂದು ವರ್ಷದಲ್ಲಿ ಮದುವೆಯಾಗಿ ಮುಂದೆ ಎರಡು ವರ್ಷಗಳಲ್ಲೆ ವಿಧವೆಯಾಗುತ್ತಾಳೆ. ಅವಳೆ ಅಮ್ಮಿ ಯಾನೆ ಬನಶಂಕರಿ. ಕಥೆ ಹಿಂದಿನ ಕಾಲದ್ದಾದರೂ ಅದರಲ್ಲಿ ಅಡಗಿರುವ ಭಾವನೆಗಳು, ವಿಚಾರಗಳು ಮತ್ತು ಅದನ್ನು ಬರೆದ ಶೈಲಿ ಇಂದಿಗೂ ಓದುಗರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಷ್ಟು ಸಶಕ್ತವಾಗಿದೆ. ಸಾಹಿತ್ಯಿಕ ಮೌಲ್ಯಗಳ ದೃಷ್ಟಿಯಿಂದ ನೋಡಿದರೂ ಈ ಕಾದಂಬರಿ ಉತ್ಕೃಷ್ಟ ಎನ್ನಬಹುದು. ಒಂದು ಕಾಲ ಘಟ್ಟದಲ್ಲಿ ಪ್ರಚಲಿತವಾಗಿದ್ದ ಸಾಮಾಜಿಕ ಮತ್ತು ಧಾರ್ಮಿಕ ರೀತಿನೀತಿಗಳ ಬಗ್ಗೆ ತಿಳಿಯಲು ಈ ಕೃತಿ ಉಪಯುಕ್ತ.
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE