ವೈದೇಹಿಯವರ ಈ ಕಾದಂಬರಿಯಲ್ಲಿ ಜಾತಿಜಾತಿಗಳ ನಡುವಿನ ಅಸ್ಪ ಶ್ಯತೆಯ ಕಥೆಯೂ ಕಾಣಸಿಗುತ್ತದೆ, ಜತೆಗೆ, ಒಂದೇ ಸಮುದಾಯದ ಒಂದೇ ಕುಟುಂಬದೊಳಗಿನ ಹಲವಾರು ಅಸ್ಪೃಶ್ಯತೆಯ ಸ್ತರಗಳನ್ನೂ ಕೂಡ ಈ ಕೃತಿಯು ಅನಾವರಣ ಮಾಡಿಸುತ್ತದೆ. ಅಲ್ಲದೆ, ಕುಂದಾಪುರ ಪ್ರಾಂತ್ಯದ ಕಾಲ್ಪನಿಕ ಕಿರುಕುಟುಂಬವೊಂದರ ಈ ಕಥೆಯು ಐತಿಹಾಸಿಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಹೋಗುವ ಒಂದು ಸಂಪ್ರದಾಯದ ಕಥನವೂ ಹೌದು; ಮತ್ತು, ಅದು ಬದಲಾವಣೆಗಳನ್ನೆಲ್ಲ ಮೀರಿ ನಿಲ್ಲುವ ಒಂದು ಸಾರ್ವತ್ರಿಕ ಮಾನವ ಕಥನವೂ ಹೌದು. ಸಣ್ಣಸಣ್ಣ ವಿವರಗಳ ಮೂಲಕವೇ ಕಟ್ಟಿಕೊಳ್ಳುತ್ತಹೋಗುವ ಈ ಕಥನಕ್ಕೆ ಕಾದಂಬರಿಯ ಹರಹಿನ ಜತೆಗೆ ಕಾವ್ಯದ ವ್ಯಂಜಕತೆಯೂ ಇದೆಯಾದ್ದರಿಂದಲೇ ಇಲ್ಲಿ ಕಾಣುವ ಸಂಸಾರಚಿತ್ರವು ನಿರ್ದಿಷ್ಟ ದೇಶಕಾಲದ ಒಂದು ಕುಟುಂಬಕಥನವಾಗುವ ಜತೆಗೇ ವಿಶಾಲ ಸಂಸಾರದ ಪ್ರತಿಮೆಯೂ ಆಗುವ ಶಕ್ತಿಯನ್ನು ಪಡೆದುಕೊಂಡಿದೆ.
ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...
READ MORE