'ಅರ್ಥಾಂತರ' ಕಾದಂಬರಿಯನ್ನು ಲೇಖಕ ಕೀರ್ತಿನಾಥ ಕುರ್ತಕೋಟಿ ಅವರು ರಚಿಸಿದ್ದಾರೆ. ಇಲ್ಲಿ ಬರುವ ಪಾತ್ರಗಳ ಬದುಕು, ಅಧಿಕಾರ, ಹೋರಾಟ ಮತ್ತು ಮಾನವೀಯತೆಗಳೆಲ್ಲದರ ನಡುವೆಯೇ ಕಾಡುವ ಕಷ್ಟ ಕಾರ್ಪಣ್ಯಗಳ, ಸಾವು ನೋವುಗಳ ಹಿನ್ನೆಲೆಯನ್ನು ಲೇಖಕರು ಎತ್ತಿ ಹಿಡಿದಿದ್ದಾರೆ. ಹಳೆಯ ರಾಜಕೀಯ ವ್ಯವಸ್ಥೆ ಹೋಗಿ ಹೊಸ ವ್ಯವಸ್ಥೆ ಬಂದಾಗ ಅಲ್ಲಾಗುವ ಬದಲಾವಣೆಗಳನ್ನು ಕೂಡ ಇಲ್ಲಿ ನಾವಿರಾಗಿ ವಿವರಿಸಲಾಗಿದೆ. ಬದುಕಿನಲ್ಲಿ ಸುಲಭವಾಗಿ ಸಿಗದೇ ಹೋದುದು, ದಕ್ಕಿಸಿಕೊಳ್ಳಲಾಗದೇ ಹೋದುದು, ಕೈತಪ್ಪಿ ಹೋದುದು, ಸಿಕ್ಕಿಯೂ ಉಳಿಸಿಕೊಳ್ಳಲಾಗದೇ ಹೋದುದು ನಿರಂತರವಾಗಿ ಕಾಡುತ್ತ, ಬದುಕಿನ ಉದ್ದೇಶ, ಅರ್ಥ ಮತ್ತು ಅಗತ್ಯಗಳನ್ನೇ ಪ್ರಶ್ನಿಸುತ್ತ ಸಹಜ ಬದುಕಿಗೆ ವಿಮುಖವಾಗಿ ನಡೆಸಲು ಹವಣಿಸುವುದರ ಬಗೆಗಿನ ವಿಷಯಗಳಿಗೆ ಕಾದಂಬರಿಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ.
ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ ಕೀರ್ತಿನಾಥ ಕುರ್ತಕೋಟಿ ಅವರು 12-10-1928ರಂದು ಗದಗಿನಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ-ಪದ್ಮಾವತಿಬಾಯಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು. ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರಾಗಿದ್ದರು. ಜೊತೆಗೆ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. 1959ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ...
READ MORE