'ಅಭಿಯಾನ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಬಾಬು ಸಂಗೀತಾರಾಧನೆಯೇ ಅವನ ಬದುಕಿನ ಗುರಿಯಾಗಿಸಿಕೊಂಡಿದ್ದ. ಅದರಿಂದಲೇ ಅವನು ತನ್ನ ಬದುಕನ್ನು ರೂಪುಗೊಳಿಸಿಕೊಳ್ಳುತ್ತಿದ್ದ. ಅವನಿಗೆ ಸಂಗೀತ ಕಲಿಸುತ್ತಿದ್ದ ಗುರುಗಳ ಮಗಳು ರಶ್ಮಿಯನ್ನು ಮದುವೆಯಾಗಲು ಬಯಸಿದವನಿಗೆ ನಿರಾಸೆಯಾಗಿತ್ತು. ಸಂಗೀತ ಕಲಿಸುತ್ತಿದ್ದ ಗುರುಗಳು ಮಗಳನ್ನು ಅವನಿಗೆ ಕೊಡಲು ಒಪ್ಪಲಿಲ್ಲ. ಅದೇ ನಿರಾಸೆಯಲ್ಲಿ ಊರು ಬಿಟ್ಟು ಇನ್ನೊಂದು ಊರು ಸೇರಿದಾಗ ಅಲ್ಲಿ ಕಂಡವಳು ರಮ್ಯ. ಬಾಬುವಿನ ಸಂಗೀತದಿಂದ ಅವನಿಗೆ ಹತ್ತಿರವಾದಳು. ಕ್ರಮೇಣ ಅವರಿಬ್ಬರಿಗೂ ಆತ್ಮೀಯತೆ ಬೆಳೆಯುತ್ತಾ ಬಂತು. ಈ ಹಿಂದೆ ತನಗೆ ಪ್ರಿಯವಾಗಿದ್ದ ನಾಗೇಶನನ್ನು ಹಿರಿಯರ ಹಠದಿಂದ ಕಳೆದುಕೊಂಡ ರಮ್ಯ ಹುಚ್ಚಿಯಂತಾಗಿದ್ದು ಎಲ್ಲರಿಗೂ ಒಂದು ಸಮಸ್ಯೆಯಾಗಿದ್ದವಳು ಬಾಬು ಆ ಊರಿಗೆ ಬಂದ ಮೇಲೆ ಬದಲಾದಳು. ಇನ್ನೇನು ರಮ್ಯ ಬಾಬು ಕಡೆ ಒಲುವು ತೋರುತ್ತಿದ್ದಾಳೆ ಬಾಬು ಕೂಡಾ ರಮ್ಯ ಕಡೆ ವಾಲುತ್ತಿದ್ದಾನೆ ಎನ್ನುವ ಸಂದರ್ಭದಲ್ಲಿ ನಾಗೇಶನ ಆಗಮನವಾಗುತ್ತದೆ. ರಮ್ಯ ಮದುವೆಯಾಗಿದ್ದು ಬಾಬುನೋ ಇಲ್ಲಾ ನಾಗೇಶನನ್ನೋ. ರಶ್ಮಿಯನ್ನು ಕಳೆದುಕೊಂಡಿದ್ದ ಬಾಬುಗೆ ರಮ್ಯ ಸಿಕ್ಕಳೇ. ಅವನ ಬದುಕು ಹೇಗಾಯಿತು ಎನ್ನುವ ಕುತೂಹಲದ ಅಂಶಗಳು ಅಭಿಯಾನದ ಹೆಗ್ಗಳಿಕೆ.
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE