ಚಿಕ್ಕ ವಯಸ್ಸಿನಲ್ಲಿ ಆಟ, ಕಲಿಕೆ ಜೊತೆಗೆ ಸೆಳೆವ ಆಕರ್ಷಣೆಗಳು, ಜಾರುವ ಹೃದಯ, ಸೆಳೆದರೂ ಗಟ್ಟಿ ಹಿಡಿದುಕೊಳ್ಳಬೇಕಾದ ಮನಸ್ಸು, ಬದುಕಲ್ಲಿ ನಡೆವ ಕರಾಳ ಘಟನೆಗಳು, ಆ ಘಟನೆಗಳ ಎದುರಿಸಬೇಕಾದ ಧೈರ್ಯ, ಪ್ರತಿ ಶೋಷಣೆ ನಂತರ ಹೆಣ್ಣನ್ನು ಸಮಾಜ ನೋಡುವ ದೃಷ್ಟಿ, ಸೋತಾಗ ಜೊತೆಯಾಗುವ ನಿಜವಾದ ಗೆಳೆಯ, ಜೊತೆಗಾರ, ಸೋತು ಎದ್ದು ನಿಲ್ಲೋ ಛಲ, ಪಾಠ ಕಲಿಸೋ ಬಾಳ ದಾರಿಗಳು ಪುಟಗಳಾಗಿವೆ. ತೃತಿಯಲಿಂಗಿಗಳಿಗೆ ನೀಡಬೇಕಾಗಿರುವ ಮೂಲಭೂತ ಸೌಕರ್ಯ, ಮೀಸಲಾತಿಗಾಗಿ ಹೋರಾಡುವ ಮತ್ತು ದೇಹಾಂಗದಾನ, ನೇತ್ರದಾನಕ್ಕೆ ಪ್ರೇರಣೆ ನೀಡುವ ಕಥಾನಾಯಕಿ ಬಿಂದುಳ ಮಗಳು ಉತ್ತರಾ. ತಾಯಿ ಮತ್ತು ಮಗಳ ಪಾತ್ರದಲ್ಲಿ ಸ್ತ್ರೀ ಎದುರಿಸುವ ಸವಾಲುಗಳೊಡನೆ ಇಲ್ಲಿ ಹೆಣ್ಣಿನ ಬದುಕೇ ಕಥೆಯಾಗಿದೆ. ಹೀಗೆ ಪ್ರತಿ ಹೆಣ್ಣಿನ ಪರಿಸ್ಥಿತಿ, ಸನ್ನಿವೇಶ, ಕಳವಳ ,ಪ್ರಶ್ನೆಗಳಿಗೆ ಉತ್ತರವೇ ಈ "ಅವಳ ಉತ್ತರ.."
ಲೇಖಕಿ,ಯುವ ಕವಯಿತ್ರಿ ಅರ್ಚನಾ ಎನ್ ಪಾಟೀಲ ಮೂಲತಃ ಹಾವೇರಿ ಜಿಲ್ಲೆಯವರು. ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ ಪದವೀಧರರು. ಪ್ರಸ್ತುತ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ.ಸಾಹಿತ್ಯ,ಸಂಘಟನೆ,ಕಥೆ,ಕವನ,ಕಾದಂಬರಿ,ಲೇಖನಗಳನ್ನು ಬರೆಯುವುದು ಮತ್ತು ರಂಗಭೂಮಿಯ ಕಲಾವಿದೆಯಾಗಿಯೂ ಬಣ್ಣ ಹಚ್ಚಿದ್ದಾರೆ.ಬಡಮಕ್ಕಳಿಗಾಗಿ ರಚಿಸಲಾದ ಉಚಿತ ಗ್ರಂಥಾಲಯ ನಿರ್ಮಿಸಲು 2000 ಕ್ಕೂ ಹೆಚ್ಚು ಹಳೆಯ ಪುಸ್ತಕಗಳ ಸಂಗ್ರಹಿಸಿ, ಪುಸ್ತಕ ಜೋಳಿಗೆ ಅಭಿಯಾನಕ್ಕೆ ರೂವಾರಿಯಾಗಿದ್ದಾರೆ. ಕೃತಿಗಳು: ನನ್ನಲ್ಲಿ ನನ್ನ ಅರಸುತ ( ಕವನ ಸಂಕಲನ) ನೀ ಹೋಗುವ ಮುನ್ನ ( ಕವನ ಸಂಕಲನ) ಅವಳ ಉತ್ತರ ( ಕಾದಂಬರಿ) ಪ್ರಶಸ್ತಿ ಮತ್ತು ಪುರಸ್ಕಾರ: ಕೇಂದ್ರ ಸಾಹಿತ್ಯ ...
READ MORE