ರಾಜಶೇಖರ್ ರವರು ಹುಟ್ಟಿದ್ದು ಬೆಂಗಳೂರಿನಲ್ಲಿ, ಪ್ರಾಥಮಿಕ ಹಾಗೂ ಮುಂದುವರೆದ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿ ನಂತರ ಸಿನಿಮಾ ಕ್ಷೇತ್ರದಲ್ಲಿ ಚಿಕ್ಕಂದಿನಿಂದಲೂ ಆಸಕ್ತಿ ಇದ್ದ ಕಾರಣ, ಇಫ್ಟಾ (IPTA) ಸಂಘಟನೆಯವರ ದೃಶ್ಯ ಮಾಧ್ಯಮ ಕಾರ್ಯಗಾರದಲ್ಲಿ ನಿರ್ದೇಶನ ವಿಭಾಗದಲ್ಲಿ ಶಿಕ್ಷಣ ಪಡೆದು ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಆಯ್ದ ಕೆಲವು ಪ್ರಮುಖ ಚಿತ್ರಗಳೆಂದರೆ, ಮೊದಲಾಸಲ(ರಾಕಿಂಗ್ ಸ್ಟಾರ್ ಯಶ್ ಅಭಿನಯ), ವೀರಬಾಹು(ದುನಿಯಾ ವಿಜಯ್) , ಚಕ್ರವರ್ತಿ (ಚಾಲೆಂಜಿಂಗ್ ಸ್ಟಾರ್ ದರ್ಶನ್),ಅಧ್ಯಕ್ಷ ಇನ್ ಅಮೆರಿಕ(ಶರಣ್), ಬೈಟು ಲವ್ (ಧನ್ವೀರ್, ಶ್ರೀ ಲೀಲಾ), ಓ ನನ್ನ ಚೇತನ (2021 ಸಾಲಿನ BFFI ಅತ್ಯುತ್ತಮ ಚಿತ್ರ). ಇದೀಗ ತಮ್ಮ ಆಸಕ್ತಿಯನ್ನು ಸಾಹಿತ್ಯದೆಡೆಗೆ ಬೀರಿರುವ ಇವರು ‘ಶತಮಾನಂಭವತಿ’ ಕೃತಿ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.