‘ಜಿಪ್ಸಿ ಜೀತು’ ಪ್ರಸಾದ್ ನಾಯ್ಕ್ ಅವರ ಕಾದಂಬರಿಯಾಗಿದೆ. ಇಲ್ಲಿ ಗೆಳೆತನ, ಸಾಹಸ, ಸಮಯಪ್ರಜ್ಞೆ, ತಂತ್ರಜ್ಞಾನ ಇತ್ಯಾದಿಗಳ ಸುತ್ತ ತೆರೆದುಕೊಳ್ಳುವ ಜೀತು ಮತ್ತು ಗೆಳೆಯರ ರೋಚಕವಾದ ಕಥನಕ ತೆರೆದುಕೊಳ್ಳುತ್ತದೆ. ಕರ್ನಾಟಕದ ಪುಟ್ಟ ಹಳ್ಳಿಯಾದ ಮಲ್ಲಿಗೆಪೇಟೆಯಲ್ಲಿ ನಾಪತ್ತೆ ಪ್ರಕರಣವೊಂದು ಅಚಾನಕ್ಕಾಗಿ ಸದ್ದು ಮಾಡುತ್ತದೆ ಎನ್ನುವುದರಿಂದ ಹಿಡಿದು, ಕಾದಂಬರಿಯ ಕಥಾನಾಯಕನಾದ, ತನ್ನ ಗೆಳೆಯರ ಬಳಗದಲ್ಲಿ ಜೀತೂ ಎಂದೇ ಕರೆಯಲ್ಪಡುವ 11 ವರ್ಷ ಪ್ರಾಯದ ಅಜಿತ್ ಏಕಾಏಕಿ ಕಾಣೆಯಾಗುತ್ತಾನೆ. ಅಷ್ಟಕ್ಕೂ ಈ ಜೀತು ಎಲ್ಲಿ ಮಾಯವಾಗಿದ್ದ? ಅವನು ಅಪಾಯದಲ್ಲಿದ್ದನೇ? ಕಾಣೆಯಾಗಿದ್ದ ಜೀತೂನನ್ನು ಹುಡುಕಲು ಅವನ ಗೆಳೆಯರಾದ ಸಬಾ, ರಿಷಿ ಮತ್ತು ಚಿಂಟು ಯಶಸ್ವಿಯಾದರೇ? ತಮ್ಮ ಗೆಳೆಯನ ಪತ್ತೆಗಾಗಿ ಮಲ್ಲಿಗೆಪೇಟೆಯ ಈ ಮೂವರು ಗೆಳೆಯರು ಸ್ಥಳೀಯ ಪೋಲೀಸರೊಂದಿಗೆ ಹೇಗೆ ತನಿಖೆಯಲ್ಲಿ ತೊಡಗಿಸಿಕೊಂಡರು? ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾಗಳೆಂಬ ಹೊಸ ಹಾದಿಗಳನ್ನು ಈ ಮಿಸ್ಸಿಂಗ್ ಪ್ರಕರಣದಲ್ಲಿ ಮಲ್ಲಿಗೆಪೇಟೆಯ ಪೋಲೀಸರು ಮತ್ತು ಚಿಣ್ಣರು ಹೇಗೆ ಬಳಸಿಕೊಂಡರು? ಎಂಬೆಲ್ಲ ಕಥನಕಗಳು ಒಟ್ಟಾಗಿ ಒಂದು ಸುಂದರ ಕತೆಯಾಗಿ ಈ ಕೃತಿಯು ಹೊರಬಂದಿದೆ.
ದಕ್ಷಿಣಕನ್ನಡದ ಕಿನ್ನಿಗೋಳಿ ಮೂಲದವರಾದ ಪ್ರಸಾದ್ ನಾಯ್ಕ್ ಲೇಖಕರು ಮತ್ತು ಅಂಕಣಕಾರರು. ಓದು, ಪ್ರವಾಸ ಮತ್ತು ಚಿತ್ರಕಲೆ ಇವರ ಇತರೆ ಹವ್ಯಾಸಗಳು. ಕನ್ನಡದ ಖ್ಯಾತ ಜಾಲತಾಣ 'ಅವಧಿ'ಯಲ್ಲಿ ಇವರು ಬರೆಯುತ್ತಿದ್ದ 'ಹಾಯ್ ಅಂಗೋಲಾ!' ಅಂಕಣವು ಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದ್ದು ಈ ಕೃತಿಗೆ 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಸಾಹಿತ್ಯ ಪುಸ್ತಕ ಬಹುಮಾನ ಸಂದಿದೆ. ಆಫ್ರಿಕಾ ಪ್ರವಾಸ ಕಥನವಾಗಿರುವ 'ಹಾಯ್ ಅಂಗೋಲಾ!' ಇವರ ಚೊಚ್ಚಲ ಕೃತಿಯೂ ಹೌದು. ಈ ಕೃತಿಯು ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗೆ ಪಾತ್ರವಾಗಿದೆ. ಕನೆಕ್ಟ್ ಕನ್ನಡ ವೆಬ್ ಪತ್ರಿಕೆಯ 'ಪಟ್ಟಾಂಗ' ಅಂಕಣವೂ ...
READ MORE