ಯಾದ್ ವಶೇಮ್

Author : ನೇಮಿಚಂದ್ರ

Pages 288

₹ 216.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ಸಾಮಾನ್ಯ ಜನ ಅನುಭವಿಸಿದ ಯಾತನೆ, ಶೋಷಣೆ, ಲೈಂಗಿಕ ಕ್ರೌರ್ಯ ಇತ್ಯಾದಿ ಚಿತ್ರಣವೇ ಈ ಕಾದಂಬರಿ. ಜರ್ಮನಿಯಿಂದ ತಂದೆಯೊಂದಿಗೆ ಭಾರತಕ್ಕೆ ಬಂದಿದ್ದರೂ ಹ್ಯಾನ್ ಎಂಬ ಯಶಾದ್ ವಶೇಮ್ ಆ ನೆನಪುಗಳಿಂದ ತತ್ತರಿಸಿ ಹೋಗುತ್ತಾಳೆ. ಒಂದು ತುಣುಕು ಬ್ರೆಡ್ ಗಾಗಿ ಹುಡುಕಿ ಹುಡುಕಿ ಬಸವಳಿದ ಮಕ್ಕಳು ಸಾಲು ಸಾಲಾಗಿ ಸತ್ತರು. ಮಹಿಳೆಯರು ಕಾಮುಕರ ಲೈಂಗಿಕ ಶೋಷಣೆಗೆ ಒಳಗಾದರು. ವೃದ್ಧರು ಬರ್ಬರ ಹಿಂಸೆ ಅನುಭವಿಸಿದರು. ಊರು ತುಂಬೆಲ್ಲಾ ನರಕ ಯಾತನೆ, ಇಂತಹ ಭೀಕರ ಚಿತ್ರಣ ಕಟ್ಟಿಕೊಡುವ ಈ ಕಾದಂಬರಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (2007) ಹಾಗೂ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ ‘ಅಕ್ಕ ಪ್ರಶಸ್ತಿ’ (2009) ಪಡೆದಿದೆ.

About the Author

ನೇಮಿಚಂದ್ರ
(16 July 1959)

ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...

READ MORE

Reviews

‘ಯಾದ್ ವಶೇಮ್’ – ನೇಮಿಚ೦ದ್ರ: ಸೀತಾರಾಮ ಹುಳಿಯಾರ: ಪುಸ್ತಕಪ್ರೇಮಿ

--

(ಹೊಸತು, ಮಾರ್ಚ್ 2015, ಪುಸ್ತಕದ ಪರಿಚಯ)

ಈ ಪುಸ್ತಕವನ್ನು ಏನೆಂದು ಬಣ್ಣಿಸುವುದು ? ಯಹೂದಿಗಳ ಮಾರಣಹೋಮದ ಕಥಾನಕ. ಜನಾಂಗದ್ವೇಷದ ಪರಾಕಾಷ್ಟೆ ಒಂದಲ್ಲ ಎರಡಲ್ಲ ನೂರು ಸಾವಿರ ಸಾವುಗಳ ನೆನಪನ್ನು ಚರಿತ್ರೆಯಲ್ಲಿ ಅಷ್ಟೊತ್ತಿ ಉಳಿಸಿಹೋದ ಭಯಾನಕ ಅಧ್ಯಾಯ. ಮನುಷ್ಯರ ಹೆಣಗಳ ಮೇಲೆ ಕೇಳಿ ಬಂದ ಮರಣಮೃದಂಗದ ಸದ್ದು, ಸಾವು ಕೇಕೆ ಹಾಕಿ ನರ್ತಿಸಿ ಹೆಚ್ಚು ಕಡಿಮೆ ಪ್ರಪಂಚದಿಂದಲೇ ಯಹೂದಿಗಳನ್ನು ನಾಮಾವಶೇಷ ಮಾಡಿದ ಉಗ್ರ ನೈಜ ಘಟನೆ, ಕಾದಂಬರಿ ರೂಪದಲ್ಲಿ ಚರಿತ್ರೆಯ ಕರಾಳ ದಿನಗಳು ನಿಮ್ಮ ಮುಂದೆ ಹರಡಿಕೊಂಡಿವೆ. ಇಲ್ಲಿ ಮನಸ್ಸು ಪ್ರಫುಲ್ಲಗೊಳ್ಳುವ ಯಾವ ಸಾಲೂ ಇಲ್ಲ. ಎಲ್ಲ ಕಣ್ಣೀರಿನ ಕಥೆ-ವ್ಯಥೆ, ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಡಕಾವ್ ನಾಜಿ ಕ್ಯಾಂಪಿನ ವಿವರ ರಕ್ತ ಹೆಪ್ಪುಗಟ್ಟಿಸುತ್ತದೆ. ಗ್ಯಾಸ್ ಛೇಂಬರ್‌ನ ವರ್ಣನೆಯಂತೂ ಸುಟ್ಟ ಹೆಣಗಳ ವಾಸನೆ ಈಗಲೂ ಮೂಗಿಗೆ ಬಡಿಯುವಂತಿದೆ. ನೀವು ಈಗಾಗಲೇ ಈ ಪುಸ್ತಕ ಓದಬಾರದೆಂದು ತೀರ್ಮಾನಿಸಿದ್ದೀರಾ ? ಬೇಡಿ ! ಚರಿತ್ರೆಯನ್ನು ಅದು ಹೇಗೇ ಇರಲಿ ತಿಳಿಯಬೇಕು. ಯಾಕೆ ಗೊತ್ತೇ ? ಹಿಟ್ಲರ್‌ನಂಥವರು ಯಾವುದೇ ಗಲ್ಲಿಯಲ್ಲಿ ಯಾವಾಗ ಬೇಕಾದರೂ ಹುಟ್ಟಿ ಬರುವ ಲಕ್ಷಣಗಳು ಈಗ ನಿಚ್ಚಳವಾಗಿವೆ. ಸಾವಿಗೆ ತುತ್ತಾದವರಿಗೆ ಮರುಗಿ ಇಂಥ ಘಟನೆಗಳು ಮರುಕಳಿಸದಂತೆ ಜಾಗತರಾಗಿರೋಣ. ಇಂಥ ಕ್ರೌರ್ಯ ಖಂಡಿಸೋಣ. ಯಾವುದೇ ಜನಾಂಗ ನೆಮ್ಮದಿಯಿಂದಿರಲಿ.

Related Books