ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಯನ್ನು ಸಂಡೂರು ವೆಂಕಟೇಶ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.' ಮಂಜಿನ ಹೂಮಳೆ ' ಒಂದು ಬಗೆಯಲ್ಲಿ ಹೇಳುವುದಾದರೆ ಸಾರ್ವಕಾಲಿಕ ಸಮಸ್ಯೆಯನ್ನು ಕುರಿತದ್ದು. ಅಂದರೆ ಹೆಣ್ಣು ಎನ್ನುವ ಜೀವ ಈ ಭೂಮಿಗೆ ಕಾಲಿಟ್ಟಾಗಿನಿಂದ ಹಿಡಿದು ಇಂದಿನವರೆಗೂ ಗಂಭೀರವಾಗಿ - ಹಗುರವಾಗಿ , ಪುರುಷರು - ಸ್ತ್ರೀಯರು ಎಂಬ ಭೇದವಿಲ್ಲದೆ ಘಂಟೆಗಟ್ಟಳೆ ಚರ್ಚಿಸಲ್ಪಟ್ಟ , ಚರ್ಚೆ ಆಗುತ್ತಿರುವ , ಮುಂದೆ ಚರ್ಚೆ ವಸ್ತುವಾಗಿಯೇ ಉಳಿಯುವ ' ಸ್ತ್ರೀ ಸ್ವಾತಂತ್ರ್ಯ ' , ಈ ಕಾದಂಬರಿಯ ಕಥಾವಸ್ತು. ಕಥಾವಸ್ತುವಿನಲ್ಲಿ ಅಂಥ ವಿಶೇಷತೆ ಇಲ್ಲದಿದ್ದರೂ ಈ ಕಥಾವಸ್ತುವನ್ನು ವಿಶ್ಲೇಷಿಸಿದ ಬಗೆಯಲ್ಲಿ ಸಂಪೂರ್ಣ ಭಿನ್ನತೆ ಇದೆ. ಸ್ವಾತಂತ್ರ್ಯವನ್ನೇ ಸ್ವೇಚ್ಛೆ ಎನ್ನುವ ಪುರುಷರು , ಸ್ವೇಚ್ಛೆಯನ್ನೆ ಸ್ವಾತಂತ್ರ್ಯ ಎನ್ನುವ ಸ್ತ್ರೀಯರಿದ್ದಾರೆ. ಅದೇ ಗೊಂದಲ ಕೊನೆಯವರೆವಿಗೂ ಉಳಿಯುತ್ತದೆ. ಅದಕ್ಕೆ ಸ್ತ್ರೀ ಸ್ವಾತಂತ್ರ್ಯ ಎಂದೆಂದಿಗೂ ಆರದ ಸಮಸ್ಯೆ. ಇದೊಂದು ಕಿರು ಕಾದಂಬರಿ. ಸ್ತ್ರೀ ಸ್ವಾತಂತ್ರ್ಯದ ಹಕ್ಕು ಪ್ರತಿ ಪಾದಿಸುವ ಅಥವಾ ಅದನ್ನು ಅಲ್ಲಗೆಳೆಯುವ ಹಗ್ಗ ಜಗ್ಗಾಟಗಳು. ಕಥೆ ಪ್ರಮುಖವಾಗಿ ಮೂರು ವ್ಯಕ್ತಿಗಳ ಸುತ್ತಾ ಸುತ್ತುತ್ತದೆ. ಕಲ್ಪನಾ , ಸುಭಾಷಿಣಿ ಮತ್ತು ಅವಳ ಗಂಡ ಪ್ರಭಾಕರ. ವಿಷ್ಣು ಮೂರ್ತಿ ಮತ್ತು ಪ್ರತ್ಯೂಶ್ ಪ್ರಮುಖ ಮೂರು ಪಾತ್ರಗಳ ವ್ಯಕ್ತಿತ್ವವನ್ನು ಒರೆಗಲ್ಲಿಗೆ ಹಚ್ಚುವ ಪಾತ್ರಗಳು.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE