ಸಾಹಿತಿ ರಾಮಚಂದ್ರ ಭಾವೆ ಅವರು 1949 ಮಾರ್ಚ್ 12ರಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಜನಿಸಿದರು. ಅಂಚೆ ಕಚೇರಿಯಲ್ಲಿ ನಿವೃತ್ತರು. `ಪ್ರಮೋಶನ್, ಎಂಡಿ ನಾಗರ, ಸುಮನಾ ಅಜ್ಞಾ, ಸಮಾಜಸೇವೆ, ಎರಡು ತಲೆ ರಾಜಕುಮಾರ' ಇತ್ಯಾದಿ. ಇವರಿಗೆ ಬಾಲಕೃಷ್ಣ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಇವರ ಮೊದಲ ಕಾದಂಬರಿ ‘ಅಜ್ಞಾತ’. ಇದಕ್ಕೆ ಅಭಿಮಾನಿ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆಯಿತು. ಸಂಯುಕ್ತ ಕರ್ನಾಟಕ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ‘ತೆರೆದಬಾಗಿಲು’ ಕಥೆಗೆ ಪ್ರಥಮ ಬಹುಮಾನ; ಮುಂಬಯಿಯ ಸ್ನೇಹ ಸಂಬಂಧ ಪತ್ರಿಕೆಯ ನಾಟಕ ಸ್ಪರ್ಧೆಯಲ್ಲಿ ‘ಎರಡು ತಲೆಯ ರಾಜ ಕುಮಾರ’ ನಾಟಕಕ್ಕೆ ದ್ವಿತೀಯ ಬಹುಮಾನ; ಉತ್ಥಾನ ಕಥಾ ಸ್ಪರ್ಧೆಯಲ್ಲಿ ‘ಅಸ್ತಿತ್ವ’ ಕಥೆಗೆ ತೃತೀಯ ಬಹುಮಾನ, ಸುಧಾ ಪತ್ರಿಕೆಯ ನಾಟಕ ಸ್ಪರ್ಧೆಯಲ್ಲಿ ‘ದೇವರ ಕೂಸು’ ನಾಟಕಕ್ಕೆ ದ್ವಿತೀಯ ಬಹುಮಾನ ದೊರೆತಿವೆ.
ಮಹಾಭಾರತದ ಅಂಧ ಧೃತರಾಷ್ಟ್ರನ ಮಾನಸಿಕ ತೊಳಲಾಟವನ್ನು ಚಿತ್ರಿಸಿರುವ ಕೃತಿ ‘ಅಂಧಪರ್ವ’. ಅಶ್ವಮೇಧ, ದೇವಯಾನಿ, ವಿಶ್ವಾಮಿತ್ರ, ಶ್ರೀ ರಾಮಾಯಣ ಪಾತ್ರಾವಲೋಕನ, ಮಹಾಭಾರತದ ಮರೆಯ ಬಾರದ ಪಾತ್ರಗಳು, ಮಹಾಭಾರತದ ಉಪಕಥೆಗಳು, ಭಾಗವತದ ಕಥೆಗಳು ಇತ್ಯಾದಿ ಹಾಗೂ ಪುರಾಣಗಳನ್ನು ಆಧರಿಸಿ ರಚಿಸಿದ ಇತರ ಕೃತಿಗಳು. ಸಾಮಾಜಿಕ ಕಾದಂಬರಿಗಳಾದ ಭಾಗ್ಯಲಕ್ಷ್ಮೀ, ಪರಿಧಿ, ಅನಾವರಣ, ನಿಕ್ಷೇಪ, ಅನ್ವೇಷಣೆ, ಗರ್ಭ, ಸಮಾನಾಂತರ ರೇಖೆಗಳು, ಥಾ ಸಂಕಲನಗಳಾದ ‘ಮಿಡಿನಾಗರ’, ‘ಪ್ರಮೋಷನ್’, ‘ತಲೆಗಳು’ ಪ್ರಕಟಗೊಂಡಿವೆ. ಇವರ ಸಣ್ಣಕಥೆಗಳು ತೆಲುಗು, ಮಲಯಾಳಂ, ಗುಜರಾತಿ ಮತ್ತು ಹಿಂದಿ ಭಾಷೆಗಳಿಗೂ ಅನುವಾದಗೊಂಡಿವೆ. ಇವರು ನರೇಗಲ್ ಬಾಳಕೃಷ್ಣ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು.